ಸೋಮವಾರ, ಜೂನ್ 14, 2021
22 °C

ವಂಕಲಕುಂಟಾ ಮಾರುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಕಲಕುಂಟಾ ಮಾರುತಿ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನಲ್ಲಿ 13 ನೇ ರಾಷ್ಟ್ರೀಯ ಹೆದ್ದಾರಿಯಿಂದ 2 ಕಿಮಿ ಒಳಗಿರುವ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶ್ರೀ ವ್ಯಾಸರಾಯರು ಪ್ರತಿಷ್ಠಾಪಿಸಿದ ಅಭಿಷ್ಠದಾಯಕ ಶ್ರೀ ಮಾರುತಿಯ ದೇವಸ್ಥಾನವಿದೆ.ಆಯತಾಕಾರದ ಮಂದಿರದೊಳಗಿನ ಗರ್ಭಗುಡಿಯಲ್ಲಿ ಎತ್ತರದ ವಿಗ್ರಹ ನೋಡಲು ಆಕರ್ಷಕವಾಗಿದ್ದು, ದೊಡ್ಡ ಸಂಖ್ಯೆಯ ಭಕ್ತರನ್ನು ಸೆಳೆಯುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ 65 ಅಡಿ ಎತ್ತರದ ರಾಜಗೋಪುರ ಶೋಭಾಯಮಾನವಾಗಿದೆ.ಇಲ್ಲಿ ನಿತ್ಯ ಪೂಜೆಯಲ್ಲದೆ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಅಮಾವಾಸ್ಯೆಗೊಮ್ಮೆ ಅನ್ನಸಂತರ್ಪಣೆ ವ್ಯವಸ್ಥೆ ಇದ್ದು, ಪರಸ್ಥಳದ ಭಕ್ತಾದಿಗಳಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಂಧ್ರಪ್ರದೇಶ, ದೂರದ ಬೆಂಗಳೂರು, ಮಂಗಳೂರು, ಮೈಸೂರು, ಗುಲ್ಬರ್ಗ ಮುಂತಾದ ಕಡೆಗಳಿಂದಲೂ ಈ ಆಂಜನೇಯ ಸ್ವಾಮಿಗೆ ಭಕ್ತಾದಿಗಳಿದ್ದಾರೆ.ಪ್ರತಿ ವರ್ಷ ಜಾತ್ರೆ, ಭಾರತ ಹುಣ್ಣಿಮೆ ನಂತರ 7ನೇ ದಿನಕ್ಕೆ ರಥೋತ್ಸವ ನಡೆಯುತ್ತದೆ. ಸೇವೆಗಳು

ಪಂಚಾಮೃತ ಅಭಿಷೇಕ  201 ರೂ

ದೊಡ್ಡ ವಾಹನ ಸೇವೆ 101 ರೂ

ದ್ವಿಚಕ್ರ ವಾಹನ ಪೂಜೆ 51 ರೂ

ಒಬ್ಬರಿಗೆ ಜವಳ 51 ರೂ

ಗಂಧದಾರತಿ 25 ರೂ

ಕಾಯಿ ಒಂದಕ್ಕೆ 1 ರೂ

ಮಂಗಳಾರತಿ 2 ರೂ

ಆರ್ಶೀವಾದ ಲಿಂಬೆ ಹಣ್ಣು 11 ರೂ  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.