ವಂಚನೆ: ಬಂಧನ

7

ವಂಚನೆ: ಬಂಧನ

Published:
Updated:

ಬೆಂಗಳೂರು: ಮಹಿಳೆಯೊಬ್ಬರಿಗೆ ಬದಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ  ನೌಕರ ಮುನಿಬಚ್ಚಪ್ಪ (54) ಎಂಬುವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.ಬಿಡಿಎನಲ್ಲಿ ಟೈಪಿಸ್ಟ್ ಆಗಿದ್ದ ಆರೋಪಿಯು ಕಮ್ಮನಹಳ್ಳಿ ನಿವಾಸಿ ಕನಿಕ್ಷಾ ಪ್ರಿಯಾ ಎಂಬುವರಿಗೆ ಎಚ್‌ಆರ್‌ಬಿಆರ್ ಲೇಔಟ್ ಸಮೀಪ ಬದಲಿ ನಿವೇಶನ ಕೊಡಿಸುವುದಾಗಿ ನಂಬಿಸಿ 2.86 ಲಕ್ಷ ರೂಪಾಯಿ ಹಣ ಪಡೆದಿದ್ದ. ಬಳಿಕ ನಿವೇಶನ ಕೊಡಿಸಿರಲಿಲ್ಲ.

 

ಹಣ ವಾಪಸ್ ಕೇಳಲು ಪ್ರಿಯಾ ಅವರು ಮೇ 3ರಂದು ಬಿಡಿಎ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅನುಚಿತವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಿಯಾ ನೀಡಿದ ದೂರು ನೀಡಿದ್ದರು. ಆರೋಪಿ ವಿರುದ್ಧ ವಂಚನೆ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry