ಭಾನುವಾರ, ಜೂನ್ 20, 2021
21 °C

ವಂಚನೆ: ಭಾರತೀಯ ವೈದ್ಯನಿಗೆ ಜೈಲು ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅನಗತ್ಯ ವೈದ್ಯಕೀಯ ಪರೀಕ್ಷೆಗಳ ಮೂಲಕ ರೋಗಿಗಳಿಗೆ ಹಾಗೂ ಆರೋಗ್ಯ ವಿಮಾ ಕಂಪೆನಿಗಳಿಗೆ ವಂಚಿಸಿದ ಭಾರತೀಯ ಮೂಲದ ಷಿಕಾಗೊ ವೈದ್ಯ ಡಾ. ಜಸ್ವಿಂದರ್ ರಾಯ್ ಚಿಬ್ಬರ್ (43) ತಪ್ಪಿತಸ್ಥ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಘೋಷಿಸಿದೆ.ಜಸ್ವಿಂದರ್ ರಾಯ್ ವಿರುದ್ಧ ಕೇಳಿಬಂದ ಎಲ್ಲ ಆರೋಪಗಳೂ ಸತ್ಯವಾಗಿವೆ ಎಂದು ವಿಚಾರಣೆಯ ನಂತರ ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯ್‌ಗೆ 70 ವರ್ಷ ಜೈಲು ಶಿಕ್ಷೆ ಹಾಗೂ 2 ಕೋಟಿ ಡಾಲರ್ ದಂಡ ವಿಧಿಸುವ ಸಾಧ್ಯತೆಯಿದೆ.

 

2007ರಿಂದ 2010ರವರೆಗಿನ ಅವಧಿಯಲ್ಲಿ ಡಾ. ಜಸ್ವಿಂದರ್ ರೋಗಿಗಳಿಗೆ ಅನಗತ್ಯ ಪರೀಕ್ಷೆಗಳನ್ನು ಸೂಚಿಸುವ ಮೂಲಕ, ರೋಗಿಗಳ ನಕಲಿ ದಾಖಲೆ ಸೃಷ್ಟಿಸುವ ಮೂಲಕ ವೈದ್ಯಕೀಯ ಸೇವಾ ಯೋಜನೆಯ ದುರುಪಯೋಗ ಮಾಡಿದ್ದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.