ವಂಚನೆ: 430 ಆಟೊ ಚಾಲಕರಿಗೆ ದಂಡ

7

ವಂಚನೆ: 430 ಆಟೊ ಚಾಲಕರಿಗೆ ದಂಡ

Published:
Updated:

ಬೆಂಗಳೂರು: ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ದೋಷಪೂರಿತ ಮೀಟರ್‌ಗಳ ನೆರವಿನಿಂದ ಸಾರ್ವಜನಿಕರಿಗೆ ವಂಚಿಸುತ್ತಿದ್ದ 430 ಆಟೊ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಸುಮಾರು 2.15 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.ಫೆ.14ರಿಂದ ಎರಡು ದಿನಗಳ ಕಾಲ ನಗರದ ಹಲವೆಡೆ ಸುಮಾರು 3,219 ಆಟೊಗಳ ಮೀಟರ್‌ಗಳನ್ನು ತಪಾಸಣೆ ಮಾಡಲಾಯಿತು. ಈ ವೇಳೆ ದೋಷಯುಕ್ತವಾಗಿದ್ದ 518 ಮೀಟರ್‌ಗಳನ್ನು ಪತ್ತೆ ಹಚ್ಚಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದೋಷಪೂರಿತ ಮೀಟರ್ ಸಹಾಯದಿಂದ ವಂಚನೆ ಮಾಡುವ ಆಟೊ ಚಾಲಕರ ವಿರುದ್ಧ ಸಾರ್ವಜನಿಕರು ಇಲಾಖೆಯ ದೂರವಾಣಿ ಸಂಖ್ಯೆ 22260554  ಅಥವಾ 22207750ಗೆ ದೂರು ನೀಡಬಹುದು. ಆಟೊ ಚಾಲಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry