ಶನಿವಾರ, ನವೆಂಬರ್ 23, 2019
17 °C

ವಂಡರ್‌ಲಾದಲ್ಲಿ ರಜೆಯ ಮೋಜು

Published:
Updated:

ಮಕ್ಕಳ ಪರೀಕ್ಷೆ ಮುಗಿದಿದೆ. ರಜೆಯ ಮಜವನ್ನು ಮಕ್ಕಳು ಖುಷಿಯಿಂದ ಅನುಭವಿಸುತ್ತಿದ್ದಾರೆ. ಮಕ್ಕಳ ಖುಷಿಯನ್ನು ಇಮ್ಮಡಿಗೊಳಿಸುವ ಸಲುವಾಗಿ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಸಜ್ಜಾಗಿದೆ. ಪರೀಕ್ಷೆ ಬಿಡುವನ್ನು ಆನಂದಿಸಲು ವಂಡರ್‌ಲಾಗೆ ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ಜತೆಗೆ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿದೆ.ವಂಡರ್‌ಲಾ ಈ ಬೇಸಿಗೆಯಲ್ಲಿ ಮಕ್ಕಳಿಗಾಗಿ ಪ್ರವೇಶ ಟಿಕೆಟ್ ಮೇಲೆ ಶೇ 40 ರಿಯಾಯಿತಿ ನೀಡಲಿದೆ. ಈ ವರ್ಷ 10ನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ರಿಯಾಯಿತಿ ಪಡೆದುಕೊಂಡ ವಿದ್ಯಾರ್ಥಿಗಳು ವಂಡರ್‌ಲಾಗೆ ಬಂದು ಭರಪೂರ ಮನರಂಜನೆ ಅನುಭವಿಸಬಹುದು.ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿ ತೋರಿಸಿ ಈ ರಿಯಾಯಿತಿ ಪಡೆಯಬಹುದಾಗಿದೆ. ಈ ಕೊಡುಗೆ ಮೇ 31ವರೆಗೆ ಮಾತ್ರ. ಹಾಗೆಯೇ, ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ ಶೇ 25 ದರ ಕಡಿತ ಪ್ರಕಟಿಸಿದೆ. 22 ವರ್ಷ ವಯೋಮಿತಿಯ ಒಳಗಿನ ವಿದ್ಯಾರ್ಥಿಗಳು ತಮ್ಮ ಮೂಲ ಗುರುತಿನ ಚೀಟಿಯನ್ನು (ಐಡಿ ಕಾರ್ಡ್) ತೋರಿಸಿ ಈ ಸೌಲಭ್ಯ ಪಡೆಯಬಹುದು. ವಾರದ ಯಾವುದೇ ದಿನದಲ್ಲಿ ಈ ಸೌಲಭ್ಯ ಲಭ್ಯ.

ಪ್ರತಿಕ್ರಿಯಿಸಿ (+)