ಗುರುವಾರ , ನವೆಂಬರ್ 21, 2019
27 °C

`ವಂಡರ್‌ಲಾ'ದಿಂದ 4ಡಿ ರೈಡ್‌ನ ಆಕರ್ಷಣೆ

Published:
Updated:

ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ವಂಡರ್‌ಲಾ ಈ ಬಾರಿಯ ಬೇಸಿಗೆ ರಜೆಯ ಮಜಕ್ಕೆ `4ಡಿ ರೈಡ್' ಆರಂಭಿಸಿದೆ. ಥಿಯೇಟ್ರಿಕಲ್ ರೈಡ್ `ಎಕ್ಸ್‌ಡಿ ಮ್ಯೋಕ್ಸ್' ಎಂಬ ಹವಾನಿಯಂತ್ರಿತ ಥಿಯೇಟರ್‌ನಲ್ಲಿ 3ಡಿ ಚಲನಚಿತ್ರದ ಜತೆಗೆ ಭೌತಿಕ ಮತ್ತು ಪರಿಸರದ ನೈಜ ಪರಿಣಾಮಗಳನ್ನು ಒಳಗೊಂಡಿರುವ ವಿಶಿಷ್ಟ ಅನುಭವವನ್ನು ಒದಗಿಸುವ ಥಿಯೇಟರ್ ಇದಾಗಿದೆ.ಇತ್ತೀಚೆಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಿ.ಆರ್.ಚಿಕ್ಕಮಠ, ಐಎಎಸ್(ನಿವತ್ತ) ಎಕ್ಸ್‌ಡಿ ಮ್ಯೋಕ್ಸ್ ಈ ರೈಡ್ ಉದ್ಘಾಟಿಸಿದರು.ವಂಡರ್‌ಲಾದ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕ ಸಿದ್ಧಿಪಡಿಸಿರುವ `ಎಕ್ಸ್‌ಡಿ ಮ್ಯೋಕ್ಸ್' ಭಾರತದ ಅತಿ ದೊಡ್ಡ 4ಡಿ ಆಕರ್ಷಣೆಯಾಗಿದೆ. ಏಕಕಾಲಕ್ಕೆ 180 ಜನರು ಕುಳಿತುಕೊಳ್ಳಬಹುದಾದ ಇದು ವೀಕ್ಷಕರಿಗೆ ವಿವಿಧ ರೋಚಕ ಚಲನವಲನ, ಚಿಮ್ಮುವ ನೀರಿನ ಸ್ಪರ್ಶ, ಮುಖದ ಮೇಲೆ ರಭಸದಿಂದ ಬೀಸುವ ಗಾಳಿಯ ಹೊಡೆತ ಹೀಗೆ ವಾಸ್ತವ ಲೋಕದ ನೈಜ ಅನುಭವವನ್ನು ನೀಡುತ್ತದೆ.ಚಿಕ್ಕುವಿನ ಸಾಹಸ ಕತೆಯನ್ನೊಳಗೊಂಡ `ಎಕ್ಸ್‌ಡಿ ಮ್ಯೋಕ್ಸ್', ಚಿಕ್ಕು ಸಮುದ್ರಕ್ಕೆ ಧುಮುಕಿ ಮರ್ಮೈಡ್ ಅಪಾಯಕ್ಕೆ ಸಿಲುಕಿದಾಗ ರಕ್ಷಿಸುವ ಮತ್ತು ನೀರಿನ ರೋಚಕ ಜಗತ್ತಿನ ಸಾಹಸಭರಿತ ಅನುಭವವನ್ನು ನೀಡುತ್ತದೆ. `ವಂಡರ್‌ಲಾಗೆ ಇದು ನಿಜಕ್ಕೂ ಹೆಮ್ಮೆಯ ಕ್ಷಣ.ಪ್ರತಿಬಾರಿಯೂ ಏನಾದರೂ ಹೊಸತನವನ್ನು ನೀಡುವ ನಮ್ಮ ಬದ್ಧತೆಗೆ ಈ ಬಾರಿ ಎಕ್ಸ್‌ಡಿ ಮ್ಯಾಕ್ಸ್ ನೀಡುತ್ತಿದ್ದೇವೆ. ಇದು ಭಾರತದಲ್ಲೇ ಅತಿ ದೊಡ್ಡದು ಎನ್ನುವುದು ಮತ್ತೊಂದು ವಿಶೇಷ. ಈ ಮೂಲಕ ಈ ಬಾರಿಯ ಬೇಸಿಗೆ ರಜೆಯನ್ನು ಇನ್ನಷ್ಟು ಉಲ್ಲಾಸದಿಂದ ವಂಡರ್‌ಲಾನಲ್ಲಿ ಕಳೆಯಬಹುದಾಗಿದೆ' ಎಂದು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರುಣ್ ಚಿಟ್ಟಿಲಪ್ಪಿಳ್ಳಿ ತಿಳಿಸಿದ್ದಾರೆ.ಎಕ್ಸ್‌ಡಿ ಮ್ಯೋಕ್ಸ್ ಕುಟುಂಬ ಸ್ನೇಹಿಯಾಗಿದ್ದು, ಇದರೊಂದಿಗೆ ವಂಡರ್‌ಲಾ ಇದೀಗ 56 ವಿನೂತನ ರೈಡ್‌ಗಳನ್ನು ಒಳಗೊಂಡಂತಾಗಿದೆ. ಪ್ರತಿಯೊಂದೂ ಮಜಾ ನೀಡುತ್ತದೆ. ಇದರೊಂದಿಗೆ ಈಗಷ್ಟೇ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆಯ ಅಸಲಿ ಪ್ರವೇಶ ಪತ್ರವನ್ನು ತಂದಲ್ಲಿ ಶೇ 40ರಷ್ಟು ರಿಯಾಯಿತಿ ಪಡೆದು ಪರೀಕ್ಷೆಯ ಒತ್ತಡದಿಂದ ಹೊರಬಂದು ನಿರಾಳರಾಗಬಹುದು ಎಂದು ವಂಡರ್‌ಲಾ ಪ್ರಕಟಣೆಯಲ್ಲಿ ತಿಳಿಸಿದೆ.                        

 

ಪ್ರತಿಕ್ರಿಯಿಸಿ (+)