ಸೋಮವಾರ, ಜನವರಿ 20, 2020
20 °C

ವಂಡರ್‌ಲಾನಲ್ಲಿ ಕ್ರಿಸ್ಮಸ್‌, ಹೊಸವರ್ಷದ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಡರ್‌ಲಾನಲ್ಲಿ ಕ್ರಿಸ್ಮಸ್‌, ಹೊಸವರ್ಷದ ಸಡಗರ

ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಸಡಗರ ಮತ್ತು ಸಂಭ್ರಮಗಳೊಂದಿಗೆ ಆಚರಿಸಲು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಸಜ್ಜಾಗಿದೆ. ಈ ವಿಶೇಷ ಸಂದರ್ಭಕ್ಕಾಗಿಯೇ ಬಗೆಬಗೆಯ ಮನರಂಜನೆ ಹಾಗೂ ಉಡುಗೊರೆ ನೀಡಲು ಸಂಸ್ಥೆ ಮುಂದಾಗಿದೆ.

ಜನವರಿ 1ರವರೆಗೂ ಆಯೋಜಿಸಲಾಗಿರುವ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗಾಗಿಯೇ ವಿಶೇಷ ಪ್ಯಾಕೇಜ್‌ ಅನ್ನು ವಂಡರ್‌ಲಾ ಘೋಷಿಸಿದೆ.ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನಗಳ ಮನರಂಜನಾ ಕೂಟಗಳನ್ನು ಗಮನದಲ್ಲಿ ಇಟ್ಟುಕೊಂಡು ಕ್ರಿಸ್ಮಸ್ ಬ್ಯಾಂಡ್, ಮೊಬೈಲ್ ಫನ್ ಆಯೋಜಿಸಿದ್ದು ಇವುಗಳಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತಿದೆ.ಬಾಣಬಿರುಸುಗಳ ಪ್ರದರ್ಶನ, ವಂಡರ್‌ಲಾ ಪರೇಡ್, ಡಿಜೆ  ಡ್ಯಾನ್ಸ್ ಫ್ಲೋರ್ ಮತ್ತು ಆಹಾರ ಉತ್ಸವ ಸಂಭ್ರಮದ ವಿಶೇಷ. ಈ ಅವಧಿಯಲ್ಲಿ ಭೇಟಿ ನೀಡುವ ಪ್ರತಿ ಮಕ್ಕಳು ತಮ್ಮ ಜನ್ಮದಿನವನ್ನು ವಂಡರ್‌ಲಾದಲ್ಲಿ ಆಚರಿಸಲು ಉಚಿತ ಟಿಕೆಟ್ ಗೆಲ್ಲುವ ಅವಕಾಶ ಹೊಂದಿರುತ್ತಾರೆ. ಇದರ ಜತೆಗೆ ಐವತ್ತು ಮಂದಿ ವಿಶೇಷ ಅತಿಥಿಯಾಗಿ ರೆಸಾರ್ಟ್‌ನಲ್ಲಿ ರಾತ್ರಿ ತಂಗುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದು.ಈ ವಿಶೇಷ ಸಂಭ್ರಮದ ಆಚರಣೆಗಳ ಪ್ರವೇಶ ಶುಲ್ಕ ವಯಸ್ಕರಿಗೆ ರೂ860 ಮತ್ತು ಮಕ್ಕಳಿಗೆ ರೂ650. ವಂಡರ್‌ಲಾ ರೆಸಾರ್ಟ್‌ನಲ್ಲಿ ತಂಗಲು ಮನಸ್ಸಾದಲ್ಲಿ ಕ್ರಿಸ್ಮಸ್‌ ಪ್ಯಕೇಜ್‌ ಲಾಭ ಪಡೆಯಬಹುದು. ಉಪಹಾರ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಉಚಿತವಾಗಿ ಪಡೆಯಬಹುದು. ಇದಕ್ಕೆ ರೂ5,700ರ ಕ್ರಿಸ್ಮಸ್ ಪ್ಯಾಕೇಜ್ ನೀಡಲಾಗುತ್ತಿದೆ (ಡಿಸೆಂಬರ್ 31 ಹೊರತುಪಡಿಸಿ).ಇಷ್ಟುಮಾತ್ರವಲ್ಲ ಹೊಸ ವರ್ಷಚಾರಣೆಯ ಸಂದರ್ಭದಲ್ಲಿ ಜೋಡಿಯಾಗಿ ವಂಡರ್‌ಲಾ ರೆಸಾರ್ಟ್‌ನಲ್ಲಿ ಕಳೆಯುವುದಾದಲ್ಲಿ ರೂ9,999 ಮತ್ತು ತೆರಿಗೆ ಸೇರಿದಂತೆ ಪ್ರತಿ ಜೋಡಿಗೆ ವಸತಿ ಪ್ಯಾಕೇಜ್ ಮತ್ತು ರೂ4,700 ಮತ್ತು ತೆರಿಗೆ ಸೇರಿದ ವಸತಿಯೇತರ ಪ್ಯಾಕೇಜ್ ಪ್ರಕಟಿಸಿದೆ. ಇದರಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ಕಾಕ್‌ಟೇಲ್‌ ಭೋಜನ ಕೂಡಾ ಒಳಗೊಂಡಿದೆ.   z

ಪ್ರತಿಕ್ರಿಯಿಸಿ (+)