ವಂಡರ್‌ಲಾ ದಸರಾ ಉತ್ಸವ

7

ವಂಡರ್‌ಲಾ ದಸರಾ ಉತ್ಸವ

Published:
Updated:

ವಂಡರ್‌ಲಾ ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ ಪ್ರಕಟಿಸಿದೆ. ಅಕ್ಟೋಬರ್ 13ರಿಂದ  28ರವರೆಗೆ ಪಾರ್ಕ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.ವಂಡರ್‌ಲಾದಲ್ಲಿ ಮತ್ತಷ್ಟು ಹೊಸ ರೋಮಾಂಚನಕಾರಿ ರೈಡ್‌ಗಳು, ನೀರಿನ ಜಾರುಬಂಡಿಗಳನ್ನು ಅಳವಡಿಸಲಾಗಿದ್ದು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಪ್ರದರ್ಶನವಿರುತ್ತದೆ. ಹಾಗೂ ನೃತ್ಯ ಕಲಾವಿದರ ಸಮೂಹದೊಂದಿಗೆ ನೃತ್ಯದಲ್ಲಿ ಪಾಲ್ಗೊಳ್ಳಬಹುದು.ಜೊತೆಗೆ ಮೊಬೈಲ್ ಫನ್ ಗೇಮ್ಸ ಮಕ್ಕಳಿಗೆ ರಂಜನೆ ನೀಡಲಿದೆ.  16 ದಿನಗಳ ಪ್ಯಾಕೇಜ್ ದೊರಕಲಿದ್ದು, ವಿಶೇಷ ರಿಯಾಯಿತಿ ಇದೆ. ವಂಡರ್‌ಲಾ ರೆಸಾರ್ಟ್‌ನಲ್ಲಿ ಒಂದು ದಿನ ತಂಗಲು ಒಬ್ಬರಿಗೆ 3ಸಾವಿರ ರೂಪಾಯಿಗೆ (ತೆರಿಗೆ ಸಹಿತ) ವಿಶೇಷ ಕೊಡುಗೆ ನೀಡಿದೆ. 5ರಿಂದ 11 ವರ್ಷ ಮಕ್ಕಳಿಗೆ 1500ರೂ. ನಿಗದಿಪಡಿಸಿದೆ. ಮನರಂಜನಾ ಪಾರ್ಕ್‌ಗೆ ಉಚಿತ ಪ್ರವೇಶ. ಈ ಅವಕಾಶ ಅ. 28ರವರೆಗೆ ಮಾತ್ರ. ಮಾಹಿತಿಗೆ: 080 33710333

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry