`ವಂಡರ್ ಲಾ'ಗೆ ಪ್ರಶಸ್ತಿ ಪುಳಕ

7

`ವಂಡರ್ ಲಾ'ಗೆ ಪ್ರಶಸ್ತಿ ಪುಳಕ

Published:
Updated:
`ವಂಡರ್ ಲಾ'ಗೆ ಪ್ರಶಸ್ತಿ ಪುಳಕ

ದೇಶದ ಅತಿದೊಡ್ಡ ಮನರಂಜನಾ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಅಗ್ಗಳಿಕೆ ಹೊಂದಿರುವ ವಂಡರ್ ಲಾ, ತನ್ನ ಅತ್ಯುತ್ತಮ ಸೇವೆ ಮತ್ತು ಸಾಧನೆಗಾಗಿ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ `ಭಾರತೀಯ ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಒಕ್ಕೂಟ ಮತ್ತು ಕೈಗಾರಿಕೆ'ಗಳ (ಐಎಎಪಿಐ) ಪ್ರದರ್ಶನದಲ್ಲಿ ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ `ಮೋಸ್ಟ್ ಇನ್ನೋವೇಟಿವ್ ರೈಡ್ ಅಂಡ್ ಅಟ್ರಾಕ್ಷನ್ಸ್', `ಟೋಟಲ್ ನಂಬರ್ ಅಂಡ್ ವೆರೈಟಿ ಆಫ್ ರೈಡ್ಸ್', `ಎಲೆಕ್ಟ್ರಾನಿಕ್ ಮೀಡಿಯಾ ಪ್ರಮೋಷನ್' ನಲ್ಲಿ ಪ್ರಶಸ್ತಿ, `ಪ್ರಿಂಟ್ ಮೀಡಿಯಾ ಪ್ರಮೋಷನ್' ವರ್ಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಹೆಚ್ಚುವರಿಯಾಗಿ `ಎನರ್ಜಿ ಸೇವಿಂಗ್ ಬೈ ಯೂಸಿಂಗ್ ಸೋಲಾರ್ ಫೋಟೊ  ವೊಲ್ಟಾಯಿಕ್ ಸೆಲ್ಸ್' ವರ್ಗದಲ್ಲಿ ವಿಶೇಷ ಪ್ರಶಸ್ತಿಯನ್ನು ವಂಡರ್ ಲಾ ಪಡೆದುಕೊಂಡಿದೆ.ಸೌರಶಕ್ತಿ ತಂತ್ರಜ್ಞಾನ ಬಳಸುತ್ತಿರುವ ದೇಶದ ಏಕೈಕ ಅಮ್ಯೂಸ್‌ಮೆಂಟ್ ಪಾರ್ಕ್ `ವಂಡರ್ ಲಾ'. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪರಿಸರ ಸ್ನೇಹಿ ಸಾಹಸದ ಅನುಭವ ನೀಡುತ್ತಿರುವುದು ಇದರ ಅಗ್ಗಳಿಕೆ.  `ಈ ಪ್ರಶಸ್ತಿಗಳ ಮೂಲಕ ನಮ್ಮನ್ನು ಗೌರವಿಸಿದ ಐಎಎಪಿಐಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಅತಿಥಿಗಳಿಗೆ ಅತ್ಯುತ್ತಮ ಸೇವೆ, ಸಾಹಸದ ಅನುಭವ ನೀಡಲು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದೇವೆ.

ಬೇರೆಡೆ ಸಿಗದ ಅತ್ಯುತ್ತಮ ಮನರಂಜನೆ ನೀಡುವುದು ನಮ್ಮ ಆದ್ಯತೆ. ಭಾರತೀಯ ಮನರಂಜನಾ ಪಾರ್ಕ್ ಉತ್ತಮ ಭವಿಷ್ಯವನ್ನು ಹೊಂದಿದೆ' ಎಂದು ಖುಷಿ ವ್ಯಕ್ತಪಡಿಸುತ್ತಾರೆ  ವಂಡರ್ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry