ವಂಡರ್ ಲಾ ಲೇಸರ್ ಶೋ

7

ವಂಡರ್ ಲಾ ಲೇಸರ್ ಶೋ

Published:
Updated:
ವಂಡರ್ ಲಾ ಲೇಸರ್ ಶೋ

ಅಚ್ಚುಮೆಚ್ಚಿನ ಮನರಂಜನಾ ಪಾರ್ಕ್ ವಂಡರ್ ಲಾ ಈಗ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಲು ಸಜ್ಜುಗೊಂಡಿದೆ. ಉಸಿರು ಬಿಗಿ ಹಿಡಿಯುವ ಅಸಂಖ್ಯಾತ ಕೌತುಕಮಯ ರೈಡ್‌ಗಳನ್ನು ಒಳಗೊಂಡಿದ್ದ  ವಂಡರ್‌ಲಾಗೆ ಈಗ ಹೊಸ ಸೇರ್ಪಡೆ ಮಲ್ಟಿಕಲರ್ ಲೇಸರ್ ಶೋ.15 ನಿಮಿಷಗಳ ಈ ಲೇಸರ್ ಶೋ, ಅತ್ಯಾಧುನಿಕ ಲೇಸರ್ ದೃಶ್ಯಗಳ ಜತೆಗೆ ಡಿಜಿಟಲ್ ಗ್ರಾಫಿಕ್ಸ್‌ನಿಂದಾಗಿ ಜನರನ್ನು ಮೋಡಿ ಮಾಡಲಿದೆ. ಥೀಮ್ ಆಧಾರಿತ ಲೇಸರ್ ಶೋ ಲೇಸರ್ ಲೈಟ್‌ಗಳ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸುವುದಲ್ಲದೆ, ಸಂಗೀತ, ಜೀವನ ಮತ್ತು ಭವಿಷ್ಯದ ಕಥೆಗಳನ್ನು ವಿವರಿಸುತ್ತದೆ. ಇವೆಲ್ಲವನ್ನೂ `ಮ್ಯೂಸಿಕ್ ಆಫ್ ಲೈಫ್~ನ ಜನಪ್ರಿಯ ಟ್ಯೂನ್‌ಗಳಿಗೆ ಅನುಗುಣವಾಗಿ ಕೊರಿಯೋಗ್ರಫಿ ಮಾಡಲಾಗಿದೆ.ಈ ಆಕರ್ಷಕ ಪ್ರದರ್ಶನಕ್ಕೆ ಡಿಜಿಟಲ್ ಸ್ಪರ್ಶವಿದ್ದು `ತ್ರೀ ಡಿ ಎಫೆಕ್ಟ್~ ಸಂಗೀತ ಪರಿಕರಗಳಿಗೆ ಜೀವ ತುಂಬಿದೆ. ವಂಡರ್ ಲಾದ ಮ್ಯೂಸಿಕ್ ಫೌಂಟೇನ್ ಒಳಾಂಗಣದಲ್ಲಿ ಈ ಪ್ರದರ್ಶನ ನಡೆಯುತ್ತದೆ. ಒಮ್ಮೆಲೆ 750 ಮಂದಿ ಕುಳಿತು ಲೇಸರ್ ಶೋ ವೀಕ್ಷಿಸಬಹುದು.

 

ಗಾಳಿಯಲ್ಲಿ ವೈವಿಧ್ಯಮಯ ಮ್ಯೋಜಿಕ್ ಸೃಷ್ಟಿಸುವ ಈ ಲೇಸರ್ ಶೋ ಜರ್ಮನ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.ರೋಮಾಂಚಕಾರಿ ಹಾಗೂ ಸಾಹಸಮಯ ರೈಡ್‌ಗಳು, ಉಲ್ಲಾಸಭರಿತ ಜಲ ಕ್ರೀಡೆಗಳ ಜತೆಗೆ ಮಕ್ಕಳ ಭ್ರಾಮಕ ಆಕರ್ಷಣೆಗಳು, ಅತ್ಯಾಕರ್ಷಕ ಮ್ಯೂಸಿಕಲ್ ಫೌಂಟೇನ್ ಒಳಗೊಂಡಿರುವ ವಂಡರ್ ಲಾ ಇಡೀ ಕುಟುಂಬದ ಮನೆರಂಜನೆಯ ಹೆಬ್ಬಾಗಿಲು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry