ಬುಧವಾರ, ನವೆಂಬರ್ 20, 2019
20 °C

ವಕೀಲರಿಗೆ ಪ್ರಾತಿನಿಧ್ಯಕ್ಕಾಗಿ ಸ್ಪರ್ಧೆ

Published:
Updated:

ಹಾವೇರಿ: ರಾಜ್ಯ ವಕೀಲರ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ವಕೀಲರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಬೇಕೆಂಬ ಉದ್ದೆೀಶದಿಂದ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಜಿಲ್ಲೆಯ ಅಭ್ಯರ್ಥಿ ಕೆ. ಶಿವಲಿಂಗಪ್ಪ ಹೇಳಿದರು.ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಗುರುವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಏಕೈಕ ಅಧಿಕೃತ 4ಅಭ್ಯರ್ಥಿಯನ್ನಾಗಿ ತಮ್ಮನ್ನು ಆಯ್ಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ ಜಿಲ್ಲೆಯ ಎಲ್ಲ ವಕೀಲರಿಗೆ ಕೃತಜ್ಞತೆ ಸಲ್ಲಿಸಿದರು. ಉತ್ತರ ಕರ್ನಾಟಕದ ವಕೀಲರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದರೆ, ಉತ್ತರ ಕರ್ನಾಟಕದ ವಕೀಲರಿಗೆ ರಾಜ್ಯ ವಕೀಲರ ಪರಿಷತ್‌ನಿಂದ ಸಿಗಬೇಕಾದ ಸೌಲಭ್ಯಗಳು ನ್ಯಾಯಯುತವಾಗಿ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಅವರು, ಜಿಲ್ಲೆಯಿಂದ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕೆಂದು ವಿನಂತಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಎಫ್. ಕಟ್ಟೆಗೌಡ್ರ ಮಾತನಾಡಿ, `ರಾಜ್ಯ ವಕೀಲರ ಪರಿಷತ್ ವಕೀಲರ ಕಲ್ಯಾಣ ನಿಧಿ ಹೆಚ್ಚಿಸುವಲ್ಲಿ ಮತ್ತು ಸಮೂಹ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಕೊಡವಲ್ಲಿ ವಿಫಲವಾಗಿದೆ. ಜಿಲ್ಲೆಯ ಅಭ್ಯರ್ಥಿ ಕೆ. ಶಿವಲಿಂಗಪ್ಪ ಅವರಿಗೆ ಮತ ನೀಡಿ, ಜಿಲ್ಲೆಯ ವಕೀಲರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು~ ಎಂದು ಹೇಳಿದರು.ಈ ಸಂದರ್ಭದಲ್ಲಿ ವಕೀಲರಾದ ಜಿ.ಸಿ. ಗಿರಿಯಪ್ಪನವರ, ಎಸ್.ಎಚ್.ಕುಲಕರ್ಣಿ, ಬಿ.ಎನ್. ಕಡಕೋಳ, ಎಸ್. ಎಂ. ಕಟ್ಟಗಿ, ಐ.ಪಿ. ಕೂಳೇನೂರು, ಎಂ.ಎಚ್. ವಾಲೀಕಾರ, ಎನ್.ಎಸ್.ಪಾಟೀಲ, ಪರಶುರಾಮ ಅಗಡಿ, ಸಿ.ಎಚ್. ಗುಡಗೂರ ಸೇರಿದಂತೆ ನೂರಕ್ಕೂ ಹೆಚ್ಚು ವಕೀಲರು ಹಾಜರಿದ್ದರು.

ಪ್ರತಿಕ್ರಿಯಿಸಿ (+)