ಮಂಗಳವಾರ, ಮೇ 11, 2021
26 °C

ವಕೀಲರ ನಿರಾಸಕ್ತಿಗೆ ಸುಪ್ರೀಂ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯ ದಿಂದ ನೇಮಕಗೊಂಡು (ಅಮಿಕಸ್ ಕ್ಯೂರಿ) ಬಡ ಆರೋಪಿಗಳ ಪರವಾಗಿ ವಾದ ಮಂಡಿಸಲು ಹಿರಿಯ ನ್ಯಾಯವಾದಿಗಳು ಆಸಕ್ತಿ ತೋರಿಸದೇ ಇರುವುದಕ್ಕೆ ಸುಪ್ರೀಂಕೋರ್ಟ್ ವಿಷಾದ ವ್ಯಕ್ತಪಡಿಸಿದೆ.ಬಡ ಆರೋಪಿಗಳಿಗೆ ಕಾನೂನಿನ ನೆರವು ನೀಡುವ ಅನುಭವಿ ನ್ಯಾಯವಾದಿಗಳ ಕೊರತೆ ಇದ್ದರೂ ಯಾರೊಬ್ಬರೂ ಇಂಥ ನೆರವು ನೀಡಲು ಮುಂದಾಗುತ್ತಿಲ್ಲ ಎಂದು ಎಸ್.ಎಚ್.ಕಪಾಡಿಯ ನೇತೃತ್ವದ ಪೀಠ ತಿಳಿಸಿದೆ.ನ್ಯಾಯಾಲಯದ ಕಾರ್ಯ ಕಲಾಪಗಳ ವರದಿಗಾರಿಕೆಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದರ ವಿರುದ್ಧ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸಿದ ಸಂದರ್ಭದಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಬಡವರಿಗೆ ಕಾನೂನು ನೆರವು ನೀಡಲು ಸಾಧ್ಯವಾಗುವಷ್ಟು ಹಣ ಸಂಗ್ರಹಕ್ಕೆ ನ್ಯಾಯಾಲಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಜೇಠ್ಮಲಾನಿ ಕೋರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.