ವಕೀಲರ ಸಂಘದ ಅಧ್ಯಕ್ಷರಾಗಿ ಗುಡೂರ ಆಯ್ಕೆ

7

ವಕೀಲರ ಸಂಘದ ಅಧ್ಯಕ್ಷರಾಗಿ ಗುಡೂರ ಆಯ್ಕೆ

Published:
Updated:
ವಕೀಲರ ಸಂಘದ ಅಧ್ಯಕ್ಷರಾಗಿ ಗುಡೂರ ಆಯ್ಕೆ

ಗದಗ: ಗದಗ ಜಿಲ್ಲಾ ವಕೀಲರ ಸಂಘದ ವತಿಯಿಂದ 2011-13 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ವಕೀಲ ವೈ.ಆರ್. ಗುಡೂರ ಆಯ್ಕೆಯಾದರು.ವಕೀಲ ವೈ.ಆರ್. ಗುಡೂರ ಅವರು 219 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಎಂ.ಎಂ. ಹಿರೇಮಠ ಅವರನ್ನು ಪರಾಭವಗೊಳಿಸಿ ಗೆಲುವು ಸಾಧಿಸಿದರು. ಉಪಾಧ್ಯಕ್ಷರಾಗಿ ಸಿ.ಆರ್. ವಡಕಣ್ಣವರ (149), ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ರಾಮೇನಹಳ್ಳಿ (134), ಸಹಕಾರ್ಯದರ್ಶಿಯಾಗಿ ಬಿ.ವಿ. ನೀರಲೋಟಿ (109), ಖಜಾಂಚಿಯಾಗಿ ರಾಜಶೇಖರ ಚಳ್ಳಮರದ (120) ಆಯ್ಕೆಯಾದರು.

ಚುನಾವಣೆ ಅಧಿಕಾರಿಗಳಾಗಿ ಡಿ.ಕೆ. ದೇಶಪಾಂಡೆ, ಎಸ್.ಬಿ. ಗಟ್ಟರಡ್ಡಿಹಾಳ, ಎಚ್.ಡಿ. ಮೇರವಾಡೆ, ಆರ್.ಎಸ್. ಜವಳಿ ಕಾರ್ಯ ನಿರ್ವಹಿಸಿದರು.ಸಂಘದ ವಿಜೇತ ನೂತನ ಪದಾಧಿಕಾರಿಗಳ ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಜಿ.ವಿ. ನೀರ್ಲರಡ್ಡಿ, ಎಸ್.ಕೆ. ಪಾಟೀಲ, ವಿ.ಸಿ. ಶಿರೋಳ, ಎ.ಎಂ. ಹದ್ಲಿ, ಆರ್.ಎಸ್. ವಡ್ಡಟ್ಟಿ, ನಾಗೇಶ ಪಾಟೀಲ, ಸುಮಾ ಶ್ರೀಗಿರಿ, ವೈ.ಡಿ. ತಳವಾರ, ಎಂ.ಎ. ಸಂಗನಾಳ, ಎಚ್.ವಿ. ಭಟ್, ಐ.ಎಲ್. ದೇಸಾಯಿ, ಎನ್.ಬಿ. ಪಾಟೀಲ, ಶಿವಕುಮಾರ ಪಾಟೀಲ, ಎಸ್.ಐ. ಮದ್ಲಿ, ಬಸವರಾಜ ಮಾಡಲಗೇರಿ, ವಿಶ್ವನಾಥ ಖಾನಾಪೂರ, ಎನ್.ಕೆ. ಗಂಗಾಧರಗೌಡ, ವಿ.ಐ. ಕೊಪ್ಪಳ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry