ಶುಕ್ರವಾರ, ನವೆಂಬರ್ 15, 2019
23 °C

ವಕೀಲರ ಸಂಘದ ಪದಾಧಿಕಾರಿ ಆಯ್ಕೆ

Published:
Updated:

ಚಿಕ್ಕೋಡಿ: 2013 ಹಾಗೂ 2015ನೇ ಸಾಲಿನ ಅವಧಿಗೆ ಸ್ಥಳೀಯ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜು ಮಿರ್ಜೆ ಹಾಗೂ ಕಾರ್ಯದರ್ಶಿಯಾಗಿ ಸುನೀಲ ಟವಳೆ ಆಯ್ಕೆಯಾದರು.417 ಸದಸ್ಯರನ್ನು ಹೊಂದಿರುವ ಚಿಕ್ಕೋಡಿ ವಕೀಲರ ಸಂಘದ 2013 ಮತ್ತು 2015 ನೇ ಸಾಲಿಗಾಗಿ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 397 ಸದಸ್ಯರು ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕಾಗಿ ರಾಜು ಮಿರ್ಜೆ, ಎಸ್.ಪಿ. ಉತ್ತೂರೆ. ಎಸ್.ಜಿ. ಹಿರೇಮಠ ಹಾಗೂ ಐ.ಡಿ. ನಾಯಿಕವಾಡೆ ಸ್ಪರ್ಧಿಸಿದ್ದರು. ಕಾರ್ಯದರ್ಶಿ ಸ್ಥಾನಕ್ಕಾಗಿ ಸುನೀಲ ಟವಳೆ, ಎಂ.ಬಿ. ಪಾಟೀಲ, ಸಿ.ಬಿ. ಭೀಮನ್ನವರ, ವಿ.ಬಿ. ಪಾಟೀಲ ಸ್ಪರ್ಧೆಯಲ್ಲಿದ್ದರು.ಖಜಾಂಚಿಯಾಗಿ  ಎಂ.ಆರ್. ಪಲ್ಲೆ, ಮಹಿಳಾ ಪ್ರತಿನಿಧಿಯಾಗಿ ಪ್ರೀತಿ ಕರಾಡಕರ, ಹಿರಿಯ ವಕೀಲರ ವಿ. ಎಸ್. ಗಾಂಧಿ, ವಿ.ಜಿ. ಮಾದಪ್ಪಗೋಳ, ಎಸ್.ಎ. ಖೋತ, ಎಂ.ಆರ್. ಯಾದವ, ಕೆ.ಡಿ. ಪಾಟೀಲ ಹಾಗೂ ಕಿರಿಯ ವಕೀಲರ ಆರ್.ಬಿ. ಹಿತ್ತಲಮನಿ, ಪಿ.ಎಂ. ಭಸ್ಮೆ, ಸಿ.ಬಿ. ಪಾಟೀಲ, ಎಸ್. ಉತ್ತೂರೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ವಕೀಲ ಬಿ.ಆರ್. ಯಾದವ ಕಾರ್ಯ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)