ಸೋಮವಾರ, ಜನವರಿ 20, 2020
21 °C

ವಕೀಲೆ ತೃಣಮೂಲ ಕಾಂಗ್ರೆಸ್‌ ಸಂಬಂಧಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಕತ್ತ: ಮಂಗಳವಾರ ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನಾಚರಣೆ, ಇದೇ ವೇಳೆ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಒಳಗಾದ ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರಿಗೆ ‘ಅನುಕೂಲ’ ಎನಿಸುವ ಗಾಳಿಸುದ್ದಿಯೊಂದು ರಾಜ್ಯದಲ್ಲಿ ಹರಿದಾಡುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.ದೇಶದಾದ್ಯಂತ  ತೀವ್ರ ವಿರೋಧ, ಚರ್ಚೆಗೆ ಒಳಗಾದ  ನ್ಯಾಯಮೂರ್ತಿ ಗಂಗೂಲಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿರುವ ಯುವತಿ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಹತ್ತಿರ ಸಂಬಂಧಿ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಸುದ್ದಿ ನಿಜವೇ

ಆದಲ್ಲಿ ನ್ಯಾ. ಗಂಗೂಲಿ ಅವರ  ಹೋರಾಟಕ್ಕೆ ಇದು ದಾಳವಾಗಬಹುದು ಎನ್ನಲಾಗಿದೆ.ಆದರೆ ನ್ಯಾ. ಗಂಗೂಲಿ ರಾಜೀನಾಮೆಗೆ ಪಟ್ಟು ಹಿಡಿದಿರುವ ತೃಣಮೂಲ ಕಾಂಗ್ರೆಸ್‌ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರುತ್ತಿದೆ.

ಪ್ರತಿಕ್ರಿಯಿಸಿ (+)