ಶುಕ್ರವಾರ, ಮೇ 7, 2021
26 °C
ಬಸವ ಜಯಂತಿ ಆಚರಣೆ

`ವಚನಗಳ ಶಕ್ತಿ ಅಪಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: `ಸಮಾನತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಶಕ್ತಿ ವಚನ ಸಾಹಿತ್ಯದ್ಲ್ಲಲಿ ಅಡಗಿದೆ' ಎಂದು ವಿಜಯಪುರ ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.`ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಮೌಢ್ಯತೆಯನ್ನು ಸರಿಸಿ ಬೆಳಕಿನ ಜ್ಯೋತಿ ಹಚ್ಚಿದ ಮಹಾನ್ ಪುರುಷ ಬಸವಣ್ಣ. ಅವರ ತತ್ವ ಸಿದ್ಧಾಂತದ ವಚನ ಸಾಹಿತ್ಯಗಳು ಪ್ರತಿಯೊಬ್ಬರಿಗೂ ಅಮೂಲ್ಯ ಜ್ಞಾನ ಭಂಡಾರ' ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಯಾಪಾ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, `ಬಸವಣ್ಣ ಕೇವಲ ಒಂದು ಸಮುದಾಯದ ವ್ಯಕ್ತಿ ಎಂಬಂತೆ ಬಿಂಬಿಸುವುದು ಸೂಕ್ತವಲ್ಲ' ಎಂದರು.`ಯಾವ ಜಾತಿಯೂ ಮೇಲು ಅಥವಾ ಕೀಳು ಅಲ್ಲ ಎಂಬ ಭಾವನೆಯನ್ನು ಸರ್ವರೂ ಪಾಲಿಸಬೇಕು ಮತ್ತು ಅರಿಯಬೇಕು ಎಂಬುದು ಬಸವಣ್ಣನ ಕಲ್ಪನೆಯಾಗಿತ್ತು. ಅದನ್ನು ಸಾಕಾರಗೊಳಿಸುವುದು ಎಲ್ಲರ ಹೊಣೆ' ಎಂದರು.ಪುರಸಭೆ ಸದಸ್ಯ ವೈ.ಸಿ.ಸತೀಶ್ ಕುಮಾರ್ ಮಾತನಾಡಿ, `ಬಸವಣ್ಣನ ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು' ಎಂದರು.ತಾಲ್ಲೂಕು ವೀರಶೈವ ಸಮಾಜ ಅಧ್ಯಕ್ಷ ಎಂ.ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಕೆ.ಸಿ.ಮಹಾಲಿಂಗಯ್ಯ, ಮಾಜಿ ಮೇಯರ್ ಬಿ.ಪುಟ್ಟರಾಜು, ಬಯಾಪಾ ಜಂಟಿ ನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿ ಎನ್.ಬಿ.ತಿಪ್ಪಣ್ಣ, ವೀರಶೈವ ಸಮಾಜದ ಉಪಾಧ್ಯಕ್ಷ ಬಿ.ವಿ.ವಿಶ್ವನಾಥ್, ಕಾರ್ಯದರ್ಶಿ ರುದ್ರಸ್ವಾಮಿ ಖಜಾಂಚಿ ಕೆ.ವೀರಭದ್ರಯ್ಯ, ನಿರ್ದೇಶಕ ಗಿರೀಶ್, ಡಿ.ಗಂಗಾಧರ್ ಉಷಾ ಪೂರ್ಣಚಂದ್ರ, ಮುಖಂಡ ಕೋಡಿ ಮಂಚೇನಹಳ್ಳಿ ನಾಗೇಶ್, ಪ್ರಸನ್ನಹಳ್ಳಿ ವಿಜಯ್‌ಕುಮಾರ್ ಇದ್ದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ದೇವನಹಳ್ಳಿ ಪುರಸಭೆ ಸದಸ್ಯ ವೈ.ಸಿ.ಸತೀಶ್ ಕುಮಾರ್ ಮತ್ತು ವಿಜಯಪುರ ಪುರಸಭೆ ಸದಸ್ಯ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.