ಭಾನುವಾರ, ಜುಲೈ 25, 2021
28 °C

ವಚನಗಳ ಸಾರ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ವಚನಗಳಲ್ಲಿರುವ ಸಾರಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಸಿದ್ದೇಶ್ವರ ಸ್ವಾಮೀಜಿ ಸೋಮವಾರ ಹೇಳಿದರು.ಪಟ್ಟಣದ ಮದ್ದಾನೇಶ್ವರ ಮಹಾಮನೆಯಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಅವರು  ಮಾತನಾಡಿದರು.ವಚನಗಳು ಪ್ರಸ್ತುತ ಅಧುನಿಕ ಪ್ರಪಂಚಕ್ಕೆ ಅತ್ಯಗತ್ಯವಾಗಿದೆ. ಎಲ್ಲರೂ ಮೇಲು-ಕೀಳು ಎಂಬುದನ್ನು ಬಿಡಬೇಕು. ಬಸವಣ್ಣನವರು ಸಮಾಜ ದಲ್ಲಿ ಎಲ್ಲರಿಗೂ ಗೌರವವನ್ನು ನೀಡಿದ್ದರು. ವೃತ್ತಿಯ ಆಧಾರದ ಮೇಲೆ ಗೌರವ ನೀಡಬೇಕಿಲ್ಲ. ಇದರಲ್ಲಿ ಮಾನವೀಯತೆ ಮೆರೆಯ ಬೇಕೆಂದು ತಿಳಿಸಿದರು.ಮೈಸೂರು ಜೆಎಸ್‌ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಜಗಳೂರು ವೀರಭದ್ರಸ್ವಾಮಿ ಮಾತನಾಡಿ, ಬಸವಣ್ಣನವರು ಮಡಿವಾಳ ಮಾಚಯ್ಯನವರ ಬಗ್ಗೆ ಅಪಾರ ಗೌರವ ಹೊಂದಿದ್ದರು, ಈ ಕಾರಣ ಕ್ಕಾಗಿ ಎಲ್ಲ ವೃತ್ತಿಗಳಲ್ಲಿರುವವರನ್ನು ಒಗ್ಗೂಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಕಲ್ಪನೆ ಹೊಂದಿದ್ದರು ಎಂದು ತಿಳಿಸಿದರು.ಮಾದಾಪಟ್ಟಣದ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಮಹಾದೇವ್ ಹಾಗೂ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.