ಮಂಗಳವಾರ, ಜೂನ್ 15, 2021
25 °C

ವಚನೋತ್ಸವದ ಪ್ರತೀಕ ಶರಣ ಸಂಸ್ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: `ಅಧಿಕಾರ, ಹಣ, ಅಪನಂಬಿಕೆ... ಹೀಗೆ ಹಲವು ವಾಸ್ತವ ಕಟು ಸತ್ಯಗಳ ನಡುವೆ ಬದುಕು ನಡೆಸಿರುವ ನಮಗೆ ವಚನಗಳು ಸದ್ವಿಚಾರ ತಿಳಿಸುವ ಕೆಲಸ ಮಾಡುತ್ತಿದೆ~ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷಗೊ.ರು. ಚನ್ನಬಸಪ್ಪ ಹೇಳಿದರು.ಇಲ್ಲಿನ ಬಸವೇಶ್ವರ ಸಭಾ ಭವನದಲ್ಲಿ  ಭಾನುವಾರ `ವಚನೋತ್ಸವ~ 500ನೇ ವಚನಮಂಟಪ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಕ್ತಿ ಮೇಲುಗೈ, ಯುಕ್ತಿ ಒಳಗೈ ಇವೆರಡರ ಬಡಿದಾಟದ ನಡುವೆ ಸಾಮಾನ್ಯ ಜನರು ಒತ್ತಡಕ್ಕೆ ಸಿಕ್ಕು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವಚನೋತ್ಸವ ಶರಣ ಸಂಸ್ಕೃತಿಯ ಪ್ರತೀಕವಾಗಿ ಮಾನವತೆ ಸಾರುತ್ತಿರುವುದು ನೆಮ್ಮದಿಗೆ ಕಾರಣವಾಗಿದೆ ಎಂದರು.ಹರಿದ ತಂತಿಯ ತಂಬೂರಿ, ತೂತಿನ ಕೊಡದಲ್ಲಿ ನೀರು ಹೊತ್ತು ಸಾಗುವುದು, ಹೆಂಡತಿ ಒಡವೆ, ವಸ್ತ್ರ ಮಾರಿ ಕುಡಿತ ಮಾಡುವ ಗಂಡಿನ ಸ್ಥಿತಿ... ಹೀಗೆ ನಗರೀಕರಣ ಸಮಾನ ಜಡ್ಡು ಹಿಡಿದಿರುವ ಸಂದರ್ಭದಲ್ಲಿ ವಚನಗಳು ಕಟುವಾದರು, ದಿಟ ಸಂಗತಿ ತೆರೆದಿಟ್ಟಿವೆ. ಇದಕ್ಕೆ ತಲೆಬಾಗಿ ಎಂದು ಕರೆ ನೀಡಿದರು.ಆಶಯ ಭಾಷಣ ಮಾಡಿದ ಶಂಕರ್ ದೇವನೂರು `ಮಾನವೀಯತೆ ಮೌಲ್ಯವನ್ನು ಬದುಕಿನ ಮೂಲಕ ತೋರಿಸುವಲ್ಲಿ ವಚನಕಾರರು ತೋರಿರುವ ಉತ್ಸಾಹ ಪ್ರಸ್ತುತ ಸಮಾಜಕ್ಕೆ ಆವಶ್ಯವಿದೆ~ ಎಂದರು.ಈ ಸಾಹಿತ್ಯ ಯಾವುದೇ ಒಂದು ಸಮಾಜ ವರ್ಗಕ್ಕೆ ಸೀಮಿತವಾಗದೇ, ಮಾನವೀಯ ಸಂಬಂಧಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿ ಆಗಿದೆ. ಇದನ್ನರಿತರು ಎಲ್ಲರೂ ಅದನ್ನು ಅರಿಯುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ವೇದಿಕೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಸ್ವಾಮಿ, ಶಿವಮೊಗ್ಗ ಬೆಕ್ಕಿನ ಕಲ್ಮಠ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ, ಶಾಸಕ ಬಿ.ಕೆ. ಸಂಗಮೇಶ್ವರ, ತಾ.ಪಂ ಅಧ್ಯಕ್ಷ ಆರ್. ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ನಗರಸಭೆ ಉಪಾಧ್ಯಕ್ಷೆ ಕೆ.ಬಿ. ಲಕ್ಷ್ಮೀ, ಕತ್ತಿಗೆ ಚನ್ನಪ್ಪ, ಬಿ. ಮೃತ್ಯುಂಜಯ ಉಪಸ್ಥಿತರಿದ್ದರು.

ಎಚ್.ಎನ್. ಮಹಾರುದ್ರ ಪ್ರಸ್ತಾವಿಕ ಮಾತನಾಡಿದರು.ಬಾರಂದೂರು ಪ್ರಕಾಶ್ ನಿರೂಪಿಸಿದರು. ಟಿ.ಎಸ್. ಪಂಚಾಕ್ಷರಪ್ಪ ವಂದಿಸಿದರು.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.