ವಚನ ಕಟ್ಟಿನ ಅದ್ದೂರಿ ಮೆರವಣಿಗೆ

7

ವಚನ ಕಟ್ಟಿನ ಅದ್ದೂರಿ ಮೆರವಣಿಗೆ

Published:
Updated:

ಲಿಂಗಸುಗೂರ: ತಾಲ್ಲೂಕಿನ ಕರಡಕಲ್ಲ ಶ್ರೀಮಠದಲ್ಲಿ ಲಿಂಗೈಕ್ಯ ಚಿತ್ತರಗಿ ಇಳಕಲ್ಲಿನ ವಿಜಯಮಹಾಂತ ಶಿವಯೋಗಿಗಳ ಶತಮಾನೋತ್ಸವ ಸಂಸ್ಮರಣೆ ನಿಮಿತ್ಯ ಕಳೆದ ಮೂರು ದಿನಗಳಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊನೆಯ ದಿನವಾದ ಶನಿವಾರ ಬಸವಾದಿ ಶರಣರ ವಚನ ಕಟ್ಟು, ಮಹಾಂತ ಶಿವಯೋಗಿಗಳ ಮತ್ತು ಬಸವಣ್ಣನವರ ಮೂರ್ತಿಗಳನ್ನು ಆನೆ ಮೇಲೆ ಅಂಬಾರಿಯಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಜಯಘೋಷಗಳ ಮಧ್ಯೆ ಅದ್ದೂರಿ ಮೆರವಣಿಗೆ ಜರುಗಿತು.ಶನಿವಾರ ಬೆಳಿಗ್ಗೆ ಲಿಂಗಧಾರಣೆ ಮುಗಿಯುತ್ತಿದ್ದಂತೆ ಜಂಗಮದಾಸೋಹ ನೆರವೇರಿಸಲಾಯಿತು. ಅಲಂಕೃತಗೊಳಿಸಿದ ಆನೆಯ ಅಂಬಾರಿಯಲ್ಲಿ ವಚನಗಳ ಕಟ್ಟು ಇಡಲಾಯಿತು. ಅಲಂಕೃತಗೊಳಿಸಿದ ತೆರೆದ ವಾಹನದಲ್ಲಿದ್ದ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಇಳಕಲ್ಲಿನ ಮಹಾಂತಪ್ಪ ಅಪ್ಪಗಳು ಪಲ್ಲಕ್ಕಿ ಮತ್ತು ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಯುವಕರ ಜಯಘೋಷಗಳು ಗ್ರಾಮದ ಜನತೆಯನ್ನು ಭಕ್ತಿ ಸಾಗರದಲ್ಲಿ ತೇಲಾಡುವಂತೆ ಮಾಡಿತ್ತು.ಚಿಕ್ಕಮಗಳೂರಿನ ಮಹಿಳಾ ವೀರಗಾಸೆ, ಗೊರೆಬಾಳ ಮತ್ತು ಕರಡಕಲ್ಲಿನ ಡ್ರಮ್‌ಸೆಟ್, ಆಮದಿಹಾಳದ ಕರಡಿ ಮಜಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಡೊಳ್ಳು ಮೇಳಗಳ ಕುಣಿತ, ವೈವಿಧ್ಯಮಯ ಭಾಜಾ ಭಜಂತ್ರಿಗಳು ಮೆರವಣಿಗೆಗೆ ರಂಗು ತಂದಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದ ಮೆರವಣಿಗೆಯಲ್ಲಿ ಮಹಿಳೆಯರು ತಲೆಯ ಮೇಲೆ ವಚನಕಟ್ಟು ಒತ್ತುಕೊಳ್ಳುವ ಮೂಲಕ ವಚನ ಕಟ್ಟಿನ ಕುಂಭ ಮೆರವಣಿಗೆ ನಡೆಸಿ ಗಮನ ಸೆಳೆದರು.ಮೆರವಣಿಗೆ ನೇತೃತ್ವವನ್ನು ಭೂಪನಗೌಡ ಕರಡಕಲ್ಲ, ಗಿರಿಮಲ್ಲನಗೌಡ ಕರಡಕಲ್ಲ, ವೀರಭದ್ರಯ್ಯಸ್ವಾಮಿ, ನಾಗಯ್ಯ ಸೊಪ್ಪಿಮಠ, ಚೆನ್ನಪ್ಪಗೌಡ, ಮಲ್ಲಪ್ಪ ಕಲ್ಲೂರ, ಶರಣಪ್ಪಗೌಡ ಅಂಗಡಿ, ಎನ್. ಸಿದ್ಧನಗೌಡ, ಬಿಲ್ಲಮರೆಡ್ಡಿ, ಎಂ.ಆರ್. ಪಾಟೀಲ, ಹನುಮಂತಪ್ಪ ಸಾಹುಕಾರ, ಶರಣಪ್ಪ ಚಿನ್ನೂರು, ಪವಾಡೆಪ್ಪ ನಾಯಕ, ತಿಪ್ಪಣ್ಣ, ನಾಗರಾಜ ಕುಂಬಾರ, ರುದ್ರಯ್ಯ, ಶರಣಪ್ಪ ಸುಂಕದ, ಶರಣಬಸವ, ಜೀವನ ಬಾಳೆಗೌಡ್ರ, ಗುಂಡಯ್ಯ ಸೊಪ್ಪಿಮಠ, ಗುಂಡಪ್ಪ ಸಜ್ಜನ, ಅನೀಫಸಾಬ, ಶಿವಶರಣಗೌಡ ಪಾಟೀಲ, ಸಿದ್ರಾಮಪ್ಪ ಬಿಟ್ಮಂಡಿ, ಶರಣಬಸವ ಗಣಾಚಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry