ವಚನ ಮುಂಗಾರು ನಾದಧಾರೆ

ಬುಧವಾರ, ಜೂಲೈ 24, 2019
°C

ವಚನ ಮುಂಗಾರು ನಾದಧಾರೆ

Published:
Updated:

ಬೆಂಗಳೂರು: `ಸಾಹಿತ್ಯದ ಮೂಲಕ ಸಾಧಿಸಲಾಗದಿರುವುದನ್ನು ಸಂಗೀತದಿಂದ ಸಾಧಿಸಬಹುದು. ಕೇಳುಗರನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಶಕ್ತಿ ಸಂಗೀತಕ್ಕಿದೆ~ ಎಂದು ಹಿರಿಯ ಕವಿ ಸಾ.ಶಿ.ಮರುಳಯ್ಯ ಅವರು ಹೇಳಿದರು.

ವಚನ ಜ್ಯೋತಿ ಬಳಗವು ಇತ್ತಿಚೆಗೆ ನಗರದಲ್ಲಿ ಆಯೋಜಿಸಿದ್ದ `ವಚನ ಮುಂಗಾರು~ ಸಂಗೀತ ವರ್ಷಧಾರೆ ಮತ್ತು ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಸಂಗೀತಕ್ಕೆ ವಿಶೇಷವಾದ ಶಕ್ತಿಯಿದೆ. ಯಾವುದೇ ನೋವು ಮರೆಸಿ ಅದಕ್ಕೆ ಔಷಧಿಯಾಗುವ ವಿಶೇಷತೆಯಿದೆ ಎಂದರು.`ವಚನ ಜ್ಯೋತಿ ಬಳಗವು ವಚನ ಮುಂಗಾರು ಹೆಸರಿನಲ್ಲಿ ವರ್ಷಧಾರೆ ನಡೆಸಿರುವುದು ಸಂಸ್ಕೃತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ನಾಡಿನ ಸಂಸ್ಕೃತಿಯನ್ನು ಉಳಿಸುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry