ವಚನ ವಿವಿ ಸ್ಥಾಪನೆಗೆ ನಿಜಗುಣಾನಂದ ಸ್ವಾಮೀಜಿ ಒತ್ತಾಯ

7
ತೋಂಟದಾರ್ಯ ಅನುಭವ ಮಂಟಪ ಉದ್ಘಾಟನೆ ನಾಳೆ

ವಚನ ವಿವಿ ಸ್ಥಾಪನೆಗೆ ನಿಜಗುಣಾನಂದ ಸ್ವಾಮೀಜಿ ಒತ್ತಾಯ

Published:
Updated:

ವಿಜಾಪುರ : ಇಲ್ಲಿನ ಗುರುಪಾದೇಶ್ವರ ನಗರದ ತೋಂಟದಾರ್ಯ ಅನುಭವ ಮಂಟಪದ ಉದ್ಘಾಟನೆ  `ಕಲ್ಯಾಣ ದರ್ಶನ' ಪ್ರವಚನ ಮುಕ್ತಾಯ ಸಮಾ ರಂಭ ಹಾಗೂ ತೋಂಟದಾರ್ಯ ವಿದ್ಯಾಪೀಠದ  ಶ್ರೀಶೈಲ ಸಂಗಪ್ಪ ಹೇರಲಗಿ ಶಾಲಾ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಇದೇ 3ರಂದು ಬೆಳಿಗ್ಗೆ 10.30ಕ್ಕೆ ಜರುಗಲಿದೆ ಎಂದು ತೋಂಟದಾರ್ಯ ಅನುಭವ ಮಂಟಪದ ಕಾರ್ಯಾಧ್ಯಕ್ಷ ಎಸ್.ಎಚ್. ನಾಡಗೌಡ್ರ ಹೇಳಿದರು.ಡಂಬಳ-ಗದಗನ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಬೈಲೂರಿನ ನಿಜಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ನಗರ ದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಂಸದ ರಮೇಶ ಜಿಗಜಿಣಗಿ ಅವ ರಿಂದ ಅನುಭವ ಮಂಟಪದ ಉದ್ಘಾಟನೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ಅವರಿಂದ ಶಾಲಾ ಶಂಕು ಸ್ಥಾಪನೆ, ಶಾಸಕ ಗೋವಿಂದ ಕಾರಜೋಳ ಶರಣರ ಭಾವಚಿತ್ರ ಅನಾವರಣ ಗೊಳಿಸಲಿದ್ದಾರೆ.ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸ ಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ರಾದ ಎಂ.ಎಂ.ಬಾಗವಾನ, ಸಿ.ಎಸ್. ನಾಡಗೌಡ, ಶಿವಾನಂದ ಪಾಟೀಲ, ರಮೇಶ ಭೂಸನೂರ, ಎ.ಎಸ್.ಪಾಟೀಲ (ನಡಹಳ್ಳಿ), ರಾಜು ಆಲಗೂರ, ಯಶ ವಂತರಾಯಗೌಡ ಪಾಟೀಲ, ರಾಮ ಕೃಷ್ಣ ದೊಡಮನಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಅಪ್ಪು ಪಟ್ಟಣಶೆಟ್ಟಿ, ಬಿ.ಎಸ್. ಪಾಟೀಲ ಸಾಸನೂರ, ಎಸ್.ಎಸ್. ಪಾಟೀಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪ್ರವಚನಕಾರ ಬೈಲೂರಿನ ನಿಜಗುಣಾ ನಂದ ಸ್ವಾಮೀಜಿ ಮಾತನಾಡಿ, ಸರ್ಕಾರ ಜಾನಪದ ಸೇರಿದಂತೆ ಇನ್ನಿತರ ಅಕಾ ಡೆಮಿ ಸ್ಥಾಪಿಸಿದಂತೆ ವಚನ ವಿಶ್ವವಿದ್ಯಾ ಲಯವನ್ನು ಸ್ಥಾಪಿಸಬೇಕು. ಜ್ಯಾತ್ಯತೀತ ಪರಂಪರೆ ಈ ದೇಶಕ್ಕೆ ಅವಶ್ಯವಾಗಿದೆ. ಇದಕ್ಕೆ ಅನುಭವ ಮಂಟಪವೇ ಸೂಕ್ತ ವೇದಿಕೆ. ಇಂಥಹ ಮಂಟಪ ಪರಂಪರೆ ಬರಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ತೋಂಟ ದಾರ್ಯ ಅನುಭವ ಮಂಟಪ ಸಮಿತಿಯ ಉಪಾಧ್ಯಕ್ಷ ಎಂ.ಎಸ್. ರುದ್ರಗೌಡರ, ಕಾರ್ಯದರ್ಶಿ ಎನ್.ಕೆ. ಕುಂಬಾರ, ಸದಸ್ಯರಾದ ಸೋಮನಗೌಡ ಎಸ್. ಪಾಟೀಲ ಸಾಸನೂರ, ಪಂಚಪ್ಪ ಕಲಬುರ್ಗಿ, ಎಸ್.ಆರ್.ಸೂಳಿಭಾವಿ ಇನ್ನಿತರರು ಉಪಸ್ಥಿತರಿದ್ದರು.ಲಿಂಗದೀಕ್ಷೆ ಇಂದು

ವಿಜಾಪುರ:
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪಂಚಮಸಾಲಿ ಲಿಂಗಾಯತ ಸಮಾಜದ ಶರಣ ಶರಣಿಯರಿಗಾಗಿ ಲಿಂಗದೀಕ್ಷೆ ಹಾಗೂ ಲಿಂಗಪೂಜಾ ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸೆ. 2 ರಂದು ಬೆಳಿಗ್ಗೆ 8ಕ್ಕೆ ಹಮ್ಮಿಕೊಳ್ಳಲಾಗಿದೆ.ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಾಟೀಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry