ವಚನ ಸಂದೇಶ, ಹಸಿರು ಜಾಗೃತಿ ಪಾದಯಾತ್ರೆಗೆ ಸ್ವಾಗತ

7

ವಚನ ಸಂದೇಶ, ಹಸಿರು ಜಾಗೃತಿ ಪಾದಯಾತ್ರೆಗೆ ಸ್ವಾಗತ

Published:
Updated:

ಕೂಡಲಸಂಗಮ: ಜ. 14ರಂದು ಸಿದ್ಧರಾಮೇಶ್ವರ ಜಯಂತಿಯಂದು ಕೊಳ್ಳೆಗಾಲ ತಾಲ್ಲೂಕಿನ ಶಿವಶರಣರ ಹರಳಯ್ಯನವರ ಅರಳೆ ಗ್ರಾಮದಿಂದ ಎಡೆಯೂರು ಸಿದ್ಧಲಿಂಗೇಶ್ವರ ತಪೋ ಭೂಮಿ ಯವರೆಗೆ  ಹೊರಟ ವಚನ ಸಂದೇಶ ಹಾಗೂ ಹಸಿರು ಜಾಗೃತಿ ಪಾದಯಾತ್ರೆ ಸೋಮವಾರ ಕೂಡಲಸಂಗಮಕ್ಕೆ ಆಗಮಿಸಿತು. ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯ ಓಂ ವೃಕ್ಷವದ್ದಿ ಯೋಗಾಶ್ರ ಮದ ತಿಪ್ಪೇರುದ್ರ ಸ್ವಾಮೀಜಿ, ಮಲ್ಲೂರು ಹಟ್ಟಿಯ ಪೂರ್ಣಾನಂದ ಸ್ವಾಮೀಜಿ, ಮೈಸೂರು ಭಾವೈಕ್ಯ ಕೇಂದ್ರದ ಬಸವಲಿಂಗಮೂರ್ತಿ ಶರಣರ ನೇತೃತ್ವದ ತಂಡವನ್ನು  ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಕಾಂಗ್ರೆಸ್ ಮುಖಂಡ ಮಹಿಮಾ ಪಟೇಲ ಕೂಡಲಸಂಗಮದಲ್ಲಿ  ಸ್ವಾಗತಿಸಿದರು.ಪಾದಯಾತ್ರೆಯ ನೇತೃತ್ವ ವಹಿಸಿದ ಓಂ ವೃಕ್ಷವದ್ಧಿ ಯೋಗಾಶ್ರಮದ ತಿಪ್ಪೇರುದ್ರ ಸ್ವಾಮೀಜಿ ಸುದ್ದಿಗಾರ ರೊಂದಿಗೆ ಮಾತನಾಡಿ, `1800 ಕಿ.ಮೀ ವರೆಗೆ ಪಾದಯಾತ್ರೆ ನಡೆಯಲಿದೆ.  ಶಿವಶರಣ ಹರಳಯ್ಯನವರ ಅರಳೆ ಗ್ರಾಮದಿಂದ ಆರಂಭವಾಗಿರುವ ಪಾದ ಯಾತ್ರೆಯು ಇದೀಗ ಕೂಡಲಸಂಗಮಕ್ಕೆ ಬಂದಿದೆ.ಇಲ್ಲಿಂದ ಬಾಗಲಕೋಟೆ, ಬಸವನಬಾಗೇವಾಡಿ, ಬಸವಕಲ್ಯಾಣದ ಮೂಲಕ ಎಡೆಯೂರನ್ನು ತಲುಪಲಿದೆ~ ಎಂದು ತಿಳಿಸಿದರು.`ನಿತ್ಯ 30 ರಿಂದ 40 ಕಿ.ಮಿ ನಡೆಯುತ್ತೇವೆ.  ಮಾರ್ಗ ಮಧ್ಯದಲ್ಲಿ ಬರುವ ಗ್ರಾಮದ ಶರಣರ ಮನೆಯಲ್ಲಿ ವಾಸ್ತವ್ಯ ಮಾಡುತ್ತೇವೆ ೆ~ ಎಂದು ಹೇಳಿದರು.ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.ಕಾಂಗ್ರೆಸ್ ಮುಖಂಡ ಮಹಿಮಾ ಪಟೇಲ, ವೀರಣ್ಣ ಶಿವಯೋಗಿ ಸ್ವಾಮೀಜಿ  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry