ವಚನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ: ಡಾ.ವಿಜಯಲಕ್ಷ್ಮೀ

7

ವಚನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ: ಡಾ.ವಿಜಯಲಕ್ಷ್ಮೀ

Published:
Updated:

ಪೀಣ್ಯ ದಾಸರಹಳ್ಳಿ:  ಕನ್ನಡವನ್ನು ಜೀವ ಭಾಷೆಯನ್ನಾಗಿಸಿದ್ದು ವೀರಶೈವ ಸಾಹಿತ್ಯ ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅಭಿಪ್ರಾಯಪಟ್ಟರು.ದಾಸರಹಳ್ಳಿ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಶಿವ ದೇವಾಲಯದಲ್ಲಿ ಏರ್ಪಡಿಸಿದ್ದ ವೀರಶೈವ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಕಳಕಳಿ ಅರ್ಥಿಕ ಬುನಾದಿ ಸರ್ವ ಸಮಾನತೆಯ ಸೂತ್ರವನ್ನು ಹಿಡಿದು ಬಸವಣ್ಣನವರು ವೀರಶೈವ ಸಾಹಿತ್ಯವನ್ನು ನಿರ್ಮಿಸಿದರು ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ದಾಸರಹಳ್ಳಿ ವೀರಶೈವ ವೇದಿಕೆ ಅಧ್ಯಕ್ಷ ಎಸ್.ನಂಜುಂಡಯ್ಯ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ.ಎಚ್. ಜಯದೇವ್ ವಿದ್ವಾಂಸರಾದ ಪ್ರೊ.ಎಸ್. ಎಸ್. ಪಡಶೆಟ್ಟಿ, ಕಲಾವಿದ ಬಸವರಾಜ ಅರಬಘಟ್ಟ ಹಾಜರಿದ್ದರು. ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾವೇದಿಕೆ ತಂಡದವರು ವಚನ ಸಂಗೀತ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry