`ವಚನ ಸಾಹಿತ್ಯ ಜೀವನಕ್ಕೆ ದಾರಿ ದೀಪ'

7

`ವಚನ ಸಾಹಿತ್ಯ ಜೀವನಕ್ಕೆ ದಾರಿ ದೀಪ'

Published:
Updated:

ರಾಣೆಬೆನ್ನೂರು: `ಶರಣರ ವಚನಗಳು ವಿದ್ಯಾರ್ಥಿ ಜೀವನಕ್ಕೆ ದಾರಿ ದೀಪವಾಗಲಿವೆ. ಕಿವುಡ ಹಾಗೂ ಮೂಕ ಮಕ್ಕಳಿಗೆ ಶರಣರ ವಚನಗಳನ್ನು ಗೋಡೆ ಮೇಲೆ ಬರೆದು ಪರಿಚಯ ಮಾಡಬೇಕು' ಎಂದು ಶರಣ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ವಾಸಣ್ಣ ಕುಸಗೂರು ಹೇಳಿದರು.ಇಲ್ಲಿನ ಮಾರುತಿನಗರದ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಶರಣರ ವಚನಗಳ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೇವಾ ಅಂಧರ ಸಂಸ್ಥೆಯ ಯೋಜನಾಧಿಕಾರಿ ಎಚ್.ಆರ್.ಶಿವಕುಮಾರ, `ಕಿವುಡ ಮತ್ತು ಮೂಕ ಮಕ್ಕಳಿಗೆ ಅನುಕಂಪ ತೋರಿದರೆ ಸಾಲದು, ಅವರಿಗೆ ಪ್ರೊತ್ಸಾಹ ನೀಡಬೇಕು' ಎಂದರು.ಶರಣ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ.ದೇವಗಿರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜನಹಳ್ಳಿಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ.ಜಾ, ಪ.ಪಂನ ಪ್ರಧಾನ ಕಾರ್ಯದರ್ಶಿ ಜೆ.ಪಿ.ಆಂಜನೇಯ ಅವರನ್ನು ಸನ್ಮಾನಿಸಲಾಯಿತು.ವಚನಗಳ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತ ಕಿವುಡ ಹಾಗೂ ಮೂಕ ಮಕ್ಕಳನ್ನು ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸನ್ಮಾನಿಸಿದರು. ಗುತ್ತೆಪ್ಪ ಹಳೇಮನಿ, ಶಿವರಾಜ ನಲವಾಗಲ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಭು ಶಿಗ್ಲಿ ಸ್ವಾಗತಿಸಿದರು. ಆರ್.ಎನ್. ಅಡಿಗೇರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry