ಮಂಗಳವಾರ, ಮೇ 11, 2021
26 °C

ವಜ್ಜಲ್ ಕುಟುಂಬದ ಸಮಾಜಸೇವೆ- ಸಿಎಂ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸಮಾಜ ಎಂಬುದು ತಾಯಿ ಇದ್ದಂತೆ. ಸಮಾಜದ  ಪ್ರೀತಿ ದೊಡ್ಡದು. ಅಂಥ ಸಮಾಜಕ್ಕೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ಅವರ ಸಹೋದರರು ನೂರಾರು ಸಾಮೂಹಿಕ ವಿವಾಹ, ಜನಪರ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ  ಡಿ.ವಿ. ಸದಾನಂದಗೌಡ ಹೇಳಿದರು.ಲಿಂಗಸುಗೂರಲ್ಲಿ ಬುಧವಾರ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಗೃಹಪ್ರವೇಶ ಹಾಗೂ 500 ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕಿನ ಬಹುದಿನದ ಬೇಡಿಕೆ ನಂದವಾಡಗಿ ಏತ ನೀರಾವರಿ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಲಾಗಿದೆ. ಇದಕ್ಕೆ ಲಿಂಗಸುಗೂರು ಶಾಸಕರ ಸತತ ಒತ್ತಡವೇ ಕಾರಣವಾಗಿದೆ. ಅವರ ನೂತನ ಮನೆ ಜನತೆಯ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ಕೇಂದ್ರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಮಾನಪ್ಪ ವಜ್ಜಲ್ ಮಾತನಾಡಿ, ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಿದ್ದಾರೆ. ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ  100ಕ್ಕೆ 100ರಷ್ಟು ಇವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ ಎಂದರು.ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ, ಸಹಜಾನಂದ ಸ್ವಾಮೀಜಿ, ಇಳಕಲ್, ಸಂತೆಕೆಲ್ಲೂರು, ಕನಕ ಗುರುಪೀಠದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ವಧುವರರಿಗೆ  ಆಶೀರ್ವದಿಸಿದರು. ಮಾನಪ್ಪ ವಜ್ಜಲ್ ಸಹೋದರರಾದ ನಾಗಪ್ಪ ಮತ್ತು ಕರಿಯಪ್ಪ ವಜ್ಜಲ್, ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಇತರರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.