ವಜ್ಜಲ ಗ್ರಾಮದಲ್ಲಿ ಸಂಭ್ರಮದ ಗಣೇಶ ಉತ್ಸವ

ಶನಿವಾರ, ಮೇ 25, 2019
27 °C

ವಜ್ಜಲ ಗ್ರಾಮದಲ್ಲಿ ಸಂಭ್ರಮದ ಗಣೇಶ ಉತ್ಸವ

Published:
Updated:

ಹುಣಸಗಿ: ಸಮೀಪದ ವಜ್ಜಲ ಗ್ರಾಮದಲ್ಲಿ ಗಜಾನನ ಉತ್ಸವವನ್ನು ಗೆಳೆಯರ ಬಳಗದ ವತಿಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಐದು ದಿನಗಳವರೆಗೆ ಗಣಪನನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಈ ಐದು ದಿನಗಳಲ್ಲಿ ಪ್ರತಿದಿನವೂ ಒಂದೊಂದು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮಸ್ಥರಿಗೆ ಮತ್ತು ಯುವಕರಿಗೆ ತಿಳಿವಳಿಕೆ ನೀಡಲಾಯಿತು.ಸೋಮವಾರ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡ ರಾಜಶೇಖರಗೌಡ ಮಾತನಾಡುತ್ತಾ, ಯುವಕರು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಿದ್ದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ. ಇದೇ ರೀತಿ ಪ್ರತಿ ವರ್ಷವೂ ಗಣೇಶನ ಉತ್ಸವವನ್ನು ವಿಶಿಷ್ಟವಾಗಿ ಆಚರಿಸಲು ತಿಳಿಸಿದರು.ಮಹಾಪೂಜೆ ನಂತರ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಕರಿಯಪ್ಪ ವಜ್ಜಲ,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗಪ್ಪ ಭಜನಿ, ಗ್ರಾಮ ಪಂಚಾಯಿತಿ ಸದಸ್ಯ ಅಪ್ಪುಗೌಡ ಪಾಟೀಲ, ರಾಮನಗೌಡ ಪೊಲೀಸ್‌ಪಾಟೀಲ, ಶಿವಣ್ಣ ಕನ್ನಳ್ಳಿ, ಕರೆಪ್ಪ, ಶ್ರೀಶೈಲ, ಸಂತೋಷ ಪಾಟೀಲ, ಚಂದ್ರಶೇಖರ ಬೋರಮಗುಂಡ, ಮಲ್ಲನಗೌಡ ಅಮಲಿಹಾಳ, ಬಸವರಾಜ ವಡಗೇರಿ, ಪ್ರಭುಗೌಡ ಶ್ರೀಗಿರ, ಯಚರಪ್ಪ ಪತ್ತಾರ, ನಿಂಗನಗೌಡ ಪಾಟೀಲ, ಬೀರಪ್ಪ ಗಿಂಡಿ, ಸಿದ್ದು ಗಿಂಡಿ, ಬಸವರಾಜ, ನಿಂಗಪ್ಪ, ದೊಡ್ಡಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಸಂಜೆ ಗಣೇಶನನ್ನು ಮೆರವಣಿಗೆಯೊಂದಿಗೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry