ಬುಧವಾರ, ನವೆಂಬರ್ 13, 2019
18 °C
ಪಿಕ್ಚರ್ ಪ್ಯಾಲೆಸ್

ವಜ್ರದ ಆಭರಣವೂ ಸುಂದರಿಯರ ಮೆರವಣಿಗೆಯೂ

Published:
Updated:

ವಿವಿಧ ಬಣ್ಣದ ಹರಳುಗಳಿಂದ ತಯಾರಿಸಿದ ಆಭರಣಗಳ ಪ್ರದರ್ಶನದಲ್ಲಿ ರೂಪದರ್ಶಿಗಳು ಬೆಲೆಬಾಳುವ ಹರಳು ಮತ್ತು ಚಿನ್ನದ ಕುಸುರಿ ಕೆಲಸಗಳಿಂದ ಅಲಂಕೃತವಾದ ಒಡವೆ, ಕೈ ಚೀಲಗಳನ್ನು ಪ್ರದರ್ಶಿಸಿದರು.ಒಬ್ಬೊಬ್ಬ ರೂಪದರ್ಶಿ ಒಂದೊಂದು ಬಗೆಯ ಆಭರಣಗಳನ್ನು ಪ್ರದರ್ಶಿಸಿದರು. ಉದ್ದನೆಯ ಕಪ್ಪುಗೌನ್ ಧರಿಸಿದ್ದ ರೂಪದರ್ಶಿಯೊಬ್ಬರು ನೀಡಿದ ಭಂಗಿಗೆ ಛಾಯಾಗ್ರಾಹಕರ ಕ್ಯಾಮೆರಾಗಳಿಗೆ ಬಿಡುವಿಲ್ಲದ ಕೆಲಸ. ನೀಳಕಾಯದ ರೂಪದರ್ಶಿಯೊಬ್ಬರು ಗಂಟೆಯಾಕಾರದ ಕೈಚೀಲ ಹಿಡಿದು ಬಂದು ಎಲ್ಲರ ಹುಬ್ಬೇರಿಸಿದರು.ಇನ್ನುಳಿದಂತೆ ಕೆಲ ರೂಪದರ್ಶಿಯರು ಕಿವಿಯೋಲೆ, ಕೊರಳಸರ, ಕೈಬಳೆಗಳನ್ನು ಪ್ರದರ್ಶಿಸಿದರು. ಅಂದಹಾಗೆ, ಈ ಶೋ ಆಯೋಜಿಸಿದ್ದು ಜೆಮ್‌ಫೀಲ್ಡ್ ್ಸ ಕಂಪೆನಿ.    ಚಿತ್ರಗಳು: ಸತೀಶ್ ಬಡಿಗೇರ್

ಪ್ರತಿಕ್ರಿಯಿಸಿ (+)