ಶುಕ್ರವಾರ, ಏಪ್ರಿಲ್ 16, 2021
31 °C

ವಜ್ರದ ಒಡವೆಗಳ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಜ್ರದ ಒಡವೆಗಳ ಮೆರುಗು

`ನಾವು ಧರಿಸುವ ಉಡುಗೆ ತೊಡುಗೆ ನಮ್ಮ ಪ್ರತಿಷ್ಠೆ ಮತ್ತು ಅಭಿರುಚಿಗೆ ಸಾಕ್ಷಿ. ಮದುವೆ, ಆರತಕ್ಷತೆ ಅಥವಾ ಅಂತಹ ಯಾವುದೇ ಸಮಾರಂಭಗಳು ನಮ್ಮನ್ನು ನಾವು ಅಭಿವ್ಯಕ್ತಿಪಡಿಸಿಕೊಳ್ಳಲು ಉತ್ತಮ ವೇದಿಕೆ~ ಎಂದರು ಅಂತರರಾಷ್ಟ್ರೀಯ ಖ್ಯಾತಿಯ ಆಭರಣ ಮತ್ತು ವಸ್ತ್ರವಿನ್ಯಾಸಕ ತರುಣ್ ತೆಹಲ್ಯಾನಿ.ತೊಡುಗೆ ಎಂದರೆ ಆಭರಣಗಳು ಎಂಬುದು ಸೂಚ್ಯ. ಯಾಕೆಂದರೆ ಬಿ-ಟೌನ್‌ನಿಂದ ಸಿಲಿಕಾನ್ ಸಿಟಿಗೆ ಅವರು ಬಂದಿದ್ದೇ ತಾವು ವಿನ್ಯಾಸ ಮಾಡಿದ ವಜ್ರದೊಡವೆಗಳ ಪ್ರಚಾರಕ್ಕಾಗಿ. ಇಸ್ಕಾನ್ ಬಳಿಯ ಆಭರಣ ಜ್ಯುವೆಲರ್ಸ್‌ ಮಳಿಗೆಯಲ್ಲಿ ಕಳೆದ ವಾರಾಂತ್ಯದಲ್ಲಿ ಆರಂಭಗೊಂಡ `ಫಾರ್‌ಎವರ್‌ಮಾಕ್‌ರ್ ~ ವಜ್ರದಲ್ಲಿ ತರುಣ್ ವಿನ್ಯಾಸಗೊಳಿಸಿದ ಒಡವೆಗಳ ದೊಡ್ಡದೊಂದು ಸಂಗ್ರಹವೇ ಗ್ರಾಹಕರಿಗಾಗಿ ತೆರೆದುಕೊಂಡಿದೆ.ತರುಣ್ ಮಾತು ವಜ್ರ ಮತ್ತು ಡಿಸೈನರ್‌ವೇರ್‌ಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.

“ದಿ ಬೇರ್ಸ್‌ ಬ್ರಾಂಡ್‌ನ ಉತ್ಪನ್ನವಾದ `ಫಾರ್‌ಎವರ್‌ಮಾರ್ಕ್~ ವಜ್ರದೊಂದಿಗೆ ದೊಡ್ಡ ದೊಡ್ಡ ಕೆಂಪು ರೂಬಿಗಳ ಕಾಂಬಿನೇಷನ್‌ನಲ್ಲಿ ವಿನ್ಯಾಸಗೊಳಿಸಿದ ದಪ್ಪನೆಯ ನೆಕ್‌ಲೇಸ್, ಅಂತಹುದೇ ಭಾರದ ಕಿವಿಯೋಲೆ ಮದುವೆಗೂ, ರಿಸೆಪ್ಷನ್‌ಗೂ ನಿಮ್ಮನ್ನು ಸೂಪರ್ ಆಗಿ ಮಿಂಚುವಂತೆ ಮಾಡುತ್ತದೆ” ಎಂದು ತರುಣ್ ಕಣ್ಣು ಮಿಟುಕಿಸಿ ಹೇಳುತ್ತಿದ್ದಂತೆ ಅವನ್ನೆಲ್ಲಾ ಧರಿಸಿದ ಮಾಡೆಲ್ ಜಾಕಿ ವಯ್ಯಾರದಿಂದ ಎಲ್ಲರ ಮುಂದೆ ಬಂದರು.“ವಜ್ರದೊಡವೆಗಳ `ತೂಕ~ವನ್ನು ಹೆಚ್ಚಿಸುವಂತಿಲ್ಲವೇ ಈಕೆ ಧರಿಸಿದ ಈ ವಧುವಿನ ಪೋಷಾಕು?”ಎನ್ನುತ್ತಾ ತಮ್ಮದೇ ವಿನ್ಯಾಸದ ಉಡುಗೆಯ ಬಗ್ಗೆ ಮಾತು ತಿರುಗಿಸಿದರು- `ಭರ್ಜರಿಯಾಗಿರುವ ಈ ಪೋಷಾಕು ಮದುವೆ ಸಂಬಂಧಿ ಯಾವುದೇ ಕಾರ್ಯಕ್ರಮಕ್ಕೂ ಸೂಕ್ತವಾಗುತ್ತದೆ. ಇದು ಎಷ್ಟು `ರಿಚ್~ ಆಗಿದೆ ನೋಡಿ. ಹಳದಿ ವಜ್ರ, ಹರಳುಗಳನ್ನು ಅಂಚಿಗೆ ಬಳಸಿರೋದ್ರಿಂದ ಇಷ್ಟು ಗ್ರ್ಯಾಂಡ್ ಆಗಿದೆ.ಬಿ-ಟೌನ್‌ನಲ್ಲಿ ಭಾರೀ ಸಮಾರಂಭಗಳಿಗೆ ಹೆಣ್ಣುಮಕ್ಕಳು ಇಷ್ಟಪಡುವ ವಿನ್ಯಾಸವಿದು. ಆಗಲೇ ಹೇಳಿದ್ನಲ್ಲ ನಿಮ್ಮ ಉಡುಗೆ ತೊಡುಗೆ ಒಂದಕ್ಕೊಂದು ಸರಿಹೊಂದುವಂತಿದ್ದರೆ ನೀವೇ ಆಕರ್ಷಣೆಯ ಕೇಂದ್ರಬಿಂದು. ಹಾಂ... ಚಪ್ಪಲಿ, ಪರ್ಸ್ ಕೂಡಾ...~`ವಿದೇಶದ ಆಭರಣ ವಿನ್ಯಾಸಗಳು ಕಣ್ಸೆಳೆಯುತ್ತವೆ ನಿಜ. ಆದರೆ ಇಲ್ಲಿನ ವಿನ್ಯಾಸಕರು ಇಲ್ಲಿನದೇ ವಿನ್ಯಾಸವನ್ನು ವಿದೇಶಿ ಬ್ರಾಂಡ್‌ನ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಈ ರಹಸ್ಯ ಗೊತ್ತಿರದ ಇಲ್ಲಿನ ಗ್ರಾಹಕರು ಅದಕ್ಕೆ ಮುಗಿಬೀಳುತ್ತಾರೆ~ ಎಂದು ಬೇಸರಿಸಿದರು ತರುಣ್.`ಈಕೆ ತೊಟ್ಟಿರುವ ಈ ನೆಕ್‌ಲೇಸ್ ನೋಡಿ. ವಜ್ರ, ರೂಬಿ ಮತ್ತು ಪಚ್ಚೆಯ ಕಾಂಬಿನೇಷನ್ ಅವರ ವಿಶಿಷ್ಟ ವಿನ್ಯಾಸದ ಅನಾರ್ಕಲಿ ಉಡುಪಿನಲ್ಲಿ ಎದ್ದುಕಾಣುತ್ತದೆ. ಉಡುಪಿನಲ್ಲೂ ಬಣ್ಣಬಣ್ಣದ ಹರಳು, ಮುತ್ತು ಇರೋದ್ರಿಂದ ಆಭರಣ ಮತ್ತು ಉಡುಪನ್ನು ಪರಸ್ಪರ ಹೊಂದಾಣಿಕೆ ಮಾಡಿ ಹೆಣೆದಿಟ್ಟಂತೆ ಭಾಸವಾಗುತ್ತದೆ. ವಜ್ರದೊಡವೆ ಈಗ ಪ್ರತಿಷ್ಠೆ ಅನ್ನುವುದಕ್ಕಿಂತಲೂ ಟ್ರೆಂಡ್ ಆಗಿಬಿಟ್ಟಿದೆ.

 

ಇದು ನೋಡಿ ಮೂರು ಪದರಿನ ನೆಕ್‌ಲೇಸ್. ವಿಶಾಲವಾದ ಕತ್ತು, ಭುಜವಿರುವ ಉಡುಪಿನಲ್ಲಿ ಚೆನ್ನಾಗಿ ತೋರುತ್ತದೆ~ ಎಂದು ಮಾಡೆಲ್ ನಿತ್ಯಾ ಅವರಿಗೆ ಬೇರೆ ಬೇರೆ ವಿನ್ಯಾಸದ ಕಂಠಾಭರಣ-ಕಿವಿಯೋಲೆ ಸೆಟ್ ಹಾಕಿ ಒಂದೊಂದರ ಬಗ್ಗೆ ಮಾಹಿತಿ ನೀಡುತ್ತಾ ಹೋದರು. ಪಕ್ಕದಲ್ಲಿದ್ದ ಜಾಕಿ ಸಹ ಬಗೆಬಗೆ ವಜ್ರಾಭರಣಗಳನ್ನು ಧರಿಸಿ ಬಿಂಕ, ವಯ್ಯಾರದಿಂದ ಕ್ಯಾಮೆರಾ ಬೆಳಕಲ್ಲಿ ಮಿಂಚಿದರು.`ಫಾರ್‌ಎವರ್‌ಮಾರ್ಕ್~ನ ವಜ್ರಾಭರಣಗಳು ಕಣ್ಣು ಕೋರೈಸುವಂತಿವೆ. ಕಾಸಗಲದ ಪಚ್ಚೆ, ಮುತ್ತು, ರೂಬಿಗಳ ಸುತ್ತ ವಜ್ರ ಪೋಣಿಸಿದ ದೊಡ್ಡ ದೊಡ್ಡ ಉಂಗುರಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದಕ್ಕೆ ಪೈಪೋಟಿ ಕೊಡುವಂತೆ ಒಂದೆಳೆ, ಎರಡೆಳೆ, ಎರಡು ಪದರು, ಮೂರು/ನಾಲ್ಕು ಪದರಿನ ನೆಕ್‌ಲೇಸ್‌ಗಳೂ ಮಳಿಗೆಯ ಖದರು ಹೆಚ್ಚಿಸಿವೆ.`ಆಭರಣ~ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತಾಪ್ ಕಾಮತ್ ಅವರಂತೂ ತರುಣ್ ತೆಹಲ್ಯಾನಿ ಸಾರಥ್ಯದಲ್ಲಿ ಫಾರ್‌ಎವರ್‌ಮಾರ್ಕ್ ವಜ್ರಾಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.20 ಸಾವಿರ ಚದರ ಅಡಿಗಳ ವಿಶಾಲವಾದ ನೂತನ ಮಳಿಗೆ, `ಆಭರಣ~ದ ಚಿನ್ನಾಭರಣ ಮತ್ತು ಬೆಳ್ಳಿಯ ವಿಭಾಗಕ್ಕೆ ಸೇರ್ಪಡೆಗೊಂಡಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿ ಬಹುವಿಧ ಆಯ್ಕೆ ಲಭ್ಯವಾಗುವಂತಾಗಿದೆ~ ಎಂದು ಅವರು ಸಂಭ್ರಮದಿಂದ ನುಡಿದರು.ಫಾರ್‌ಎವರ್‌ಮಾರ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಜೈನ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.