ಸೋಮವಾರ, ಜೂನ್ 21, 2021
28 °C
ರೂ. 4 ಕೋಟಿ ಮೌಲ್ಯದ ವಜ್ರ ಜಪ್ತಿ

ವಜ್ರ ಮಾರುತ್ತಿದ್ದ ವ್ಯಕ್ತಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮವಾಗಿ ವಜ್ರ ಮಾರು­­ತ್ತಿದ್ದ ಆರೋಪದ ಮೇಲೆ ತಮಿ­ಳುನಾಡು ಮೂಲದ ವೆಟ್ರಿ­ವೇಲು (47) ಎಂಬಾತನನ್ನು ಬಂಧಿ­ಸಿರುವ ರಾಜಾ­ಜಿನಗರ ಪೊಲೀಸರು ರೂ. 4 ಕೋಟಿ ಮೌಲ್ಯದ ವಜ್ರ ವಶಪಡಿಸಿ­ಕೊಂಡಿದ್ದಾರೆ.ಕೃಷಿಕನಾದ ವೆಟ್ರಿವೇಲು ಫೆ.25 ರಂದು ವಜ್ರದೊಂದಿಗೆ ನಗರಕ್ಕೆ ಬಂದಿದ್ದ. ರಾಜಾಜಿನಗರ ನಾಲ್ಕನೇ ಹಂತದ ಶಿವಾಲ್ಸ್‌ ಹೋಟೆಲ್‌ನಲ್ಲಿ ತಂಗಿದ್ದ ಆತ ಚಿಕ್ಕಪೇಟೆಯ ವ್ಯಕ್ತಿಯೊ­ಬ್ಬರಿಗೆ ವಜ್ರ ಮಾರಾಟ ಮಾಡಲು ಉದ್ದೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.‘ಪೊಲೀಸ್‌ ಮಾಹಿತಿದಾರನೊಬ್ಬ ವೆಟ್ರಿವೇಲು ಬಗ್ಗೆ ಮಾಹಿತಿ ನೀಡಿದ್ದ. ಆ ಸುಳಿವು ಆಧರಿಸಿ ರಾಜಾಜಿನಗರ ಠಾಣೆಯ ಸಿಬ್ಬಂದಿ ವಜ್ರ ಖರೀದಿಸುವ ಸೋಗಿನಲ್ಲಿ ಶಿವಾಲ್ಸ್‌ ಹೋಟೆಲ್‌ಗೆ ಮಫ್ತಿಯಲ್ಲಿ ಹೋಗಿ ಆತನನ್ನು ಬಂಧಿ­ಸಿ­ದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.‘ಆರೋಪಿಯ ಬಳಿ ಇದ್ದ ವಜ್ರ­ವನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ ಸುಮಾರು ರೂ. 4 ಕೋಟಿ’ ಎಂದು ಹೇಳಿದ್ದಾರೆ.

‘ಆರೋಪಿಯು ವಜ್ರವನ್ನು ತನ್ನ ಮನೆಯಿಂದ ತೆಗೆದುಕೊಂಡು ಬಂದಿ­ದ್ದಾಗಿ ಹೇಳಿಕೆ ಕೊಟ್ಟಿದ್ದಾನೆ. ಆ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ’ ಎಂದು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.