ವಡವಡಗಿ: ಡೆಂಗಿಗೆ ಒಲಿದ ಅದೃಷ್ಟದ ಅಧ್ಯಕ್ಷ ಸ್ಥಾನ

7

ವಡವಡಗಿ: ಡೆಂಗಿಗೆ ಒಲಿದ ಅದೃಷ್ಟದ ಅಧ್ಯಕ್ಷ ಸ್ಥಾನ

Published:
Updated:

ಬಸನಬಾಗೇವಾಡಿ: ತಾಲ್ಲೂಕಿನ ವಡವಡಗಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ 2ನೇ ಅವಧಿ ಆಯ್ಕೆಗಾಗಿ ಜರುಗಿದ ಚುನಾವಣೆಯಲ್ಲಿ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.  ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ `ಬಿ' ಮೀಸಲಾಗಿತ್ತು. ಬಸವರಾಜ ಡೆಂಗಿ ಮತ್ತು ರುದ್ರಗೌಡ ಧನ್ನೂರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ  ಪಾರ್ವತಿ ಪೊಲ್ಲೇಶಿ ಮತ್ತು ನಿಂಗಮ್ಮ ತಳವಾರ ನಾಮಪತ್ರ ಸಲ್ಲಿಸಿದ್ದರು.16 ಸದಸ್ಯ ಬಲಹೊಂದಿರುವ ಗ್ರಾ.ಪಂ ಚುನಾವಣೆಯಲ್ಲಿ ಎಲ್ಲ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಡೆಂಗಿ ಹಾಗೂ ರುದ್ರಗೌಡ ಧನ್ನೂರ ಪರವಾಗಿ ತಲಾ 8 ಸದಸ್ಯರು ಕೈ ಎತ್ತಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ  ಪಾರ್ವತಿ ಪೊಲ್ಲೇಶಿ ಹಾಗೂ ನಿಂಗಮ್ಮ ತಳವಾರ ಅವರಿಗೆ ತಲಾ 8 ಸದಸ್ಯರು ಬೆಂಬಲಿಸಿ ಕೈ ಎತ್ತಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry