ಶನಿವಾರ, ಜನವರಿ 25, 2020
16 °C

ವಡ್ಡರಹಟ್ಟಿ ಸುವರ್ಣಗ್ರಾಮ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಗ್ರಾಮ ಪಂಚಾಯಿತಿ ಆಡಳಿತ ಬಿಜೆಪಿ ತೆಕ್ಕೆಗೆ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿಗೆ ಸುವರ್ಣಗ್ರಾಮ ಯೋಜನೆ ಮಂಜೂರು ಮಾಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದರು. ವಡ್ಡರಹಟ್ಟಿ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಬಿಜೆಪಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಿನ್ನೆಲೆ ಯಲಗಲಿ ಪಂಚಾಯಿತಿಯ ಕೆಲ ಸದಸ್ಯರು ಹಾಗೂ ಗ್ರಾಮದ ಮುಖಂಡರು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಮುಖಂಡ ಎನ್. ಸೂರಿಬಾಬು ಹಾಗೂ ಶಾಸಕ ಮುನವಳ್ಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎನ್. ಸೂರಿಬಾಬು, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ವಶಪಡಿಸಿಕೊಳ್ಳಲು ಭಾರಿ ಶ್ರಮ ಪಟ್ಟಿದ್ದೇವೆ. ಆ ಶ್ರಮಕ್ಕೆ ಅಭಿವೃದ್ಧಿ ಮೂಲಕ ಸಾರ್ಥಕತೆ ನೀಡಬೇಕು. ಈ ಹಿನ್ನೆಲೆ ಗ್ರಾಮಕ್ಕೆ ಸುವರ್ಣಗ್ರಾಮ ಮಂಜೂರು ಮಾಡಿಸಬೇಕು ಎಂದರು.ದೊರೆತ ಅಧಿಕಾರವಧಿಯನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಮತ್ತೆ ಜನರ ಬಳಿಗೆ ತೆರಳಿ ಮತ ಕೇಳಲು ಒಂದು ದಾರಿ ಸಿಕ್ಕಂತಾಗುತ್ತದೆ ಎಂದು ಸೂರಿಬಾಬು ಶಾಸಕರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟರು.ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ಕೋಟಯ್ಯಕ್ಯಾಂಪಿನಲ್ಲಿ 25ನೇ ವಿತರಣಾ ಕಾಲುವೆ ಮೂಲಕ ನೀರು ಹರಿಸಿದಂತೆ ವಡ್ಡರಹಟ್ಟಿ ಸಮೀಪ 17ನೇ ಕಾಲುವೆ ಹರಿಯುತ್ತಿದೆ. ಜಲ ನಿರ್ಮಲದಂತ ಯೋಜನೆ ಮಂಜೂರು ಮಾಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.ಶಾಸಕ ಪರಣ್ಣ ಮುನವಳ್ಳಿ, ಸುವರ್ಣಗ್ರಾಮ ಯೋಜನೆಯ ಮೂಲಕ ಗ್ರಾಮದ ರಸ್ತೆ, ಚರಂಡಿ, ಸಮುದಾಯ ಭವನ, ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು. ನೀರು, ರಸ್ತೆಗೆ ಆದ್ಯತೆ ನೀಡಲಾಗುವುದು ಎಂಬ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೋಟೆ ಬಸವರಾಜ, ವೀರಭದ್ರಪ್ಪ ನಾಯಕ, ಬಾಗೋಡಿ ಗೌರೀಶ, ಶಿವಪ್ಪ ನಾಯಕ, ಸಣ್ಣ ರಾಮಣ್ಣ, ಚೇರ್ಮನ್ ರಾಮಣ್ಣ, ಷರೀಫ್, ಬಸವರಾಜ ಕರಡಿ ಸೇರಿದಂತೆ ಗ್ರಾಮದ ಮತ್ತಿತರ ಮುಖಂಡರು ಹಾಜರಿದ್ದರು.

ಪ್ರತಿಕ್ರಿಯಿಸಿ (+)