ವತ್ಸಲಾ ಗರುಡಾಚಾರ್‌

7
ನಿಧನ

ವತ್ಸಲಾ ಗರುಡಾಚಾರ್‌

Published:
Updated:

ಬೆಂಗಳೂರು: ನಿವೃತ್ತ ಡಿಜಿಪಿ ಬಿ.­ಎನ್‌.­ಗರುಡಾ­ಚಾರ್‌ ಅವರ ಪತ್ನಿ ವತ್ಸಲಾ (80) ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾದರು.

ಹೃದಯ ಸಂಬಂಧಿ ಕಾಯಿಲೆ­ಯಿಂದ ಬಳಲುತ್ತಿದ್ದ ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರಿಗೆ ಪತಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಉದ್ಯಮಿ ಉದಯ್‌ ಗರುಡಾಚಾರ್‌ ಅವರು ಮೃತರ ಮಗ.  ವಿಲ್ಸನ್‌ ಗಾರ್ಡನ್‌ ವಿದ್ಯುತ್‌ ಚಿತಾಗಾರದಲ್ಲಿ ಸೋಮವಾರ (ಸೆ. 16) ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬ ಸದಸ್ಯರ ಸಂಪರ್ಕಕ್ಕೆ: 9845046722ಎಚ್‌.ಆರ್‌. ರಾಜಶೇಖರ್‌

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾ­­ಪಕ ಎಚ್‌.ಆರ್‌. ರಾಜ­ಶೇಖರ (49) ಶನಿವಾರ ಮಧ್ಯಾಹ್ನ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಅಂತ್ಯಕ್ರಿಯೆ ಗುಬ್ಬಿ ತಾಲ್ಲೂ­ಕಿನ ಹೊಸಕೆರೆ­ಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿದೆ. ‘ನಮ್ಮ ಯಜಮಾನರು’, ‘ಸಿಬಿಐ ದುರ್ಗಾ’, ‘ಪಾರ್ಥ’, ‘ಸರ್ದಾರ’, ‘ಶಂಭು’ ಸೇರಿದಂತೆ ಹಲವು ಚಲನ­ಚಿತ್ರ­ಗಳನ್ನು ರಾಜಶೇಖರ ನಿರ್ಮಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry