ಭಾನುವಾರ, ಏಪ್ರಿಲ್ 18, 2021
23 °C

ವಧು-ವರಾನ್ವೇಷಣಾ ಕೇಂದ್ರಗಳು ವ್ಯಾಪಾರೀಕರಣವಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ವಧು-ವರಾನ್ವೇಷಣಾ ಕೇಂದ್ರಗಳು ಸಮಾಜದಲ್ಲಿನ ದುರ್ಬಲರಿಗೆ ನೆರವಾಗಬೇಕೇ ಹೊರತು, ವ್ಯಾಪಾರಿ ಕೇಂದ್ರಗಳಾಗಬಾರದು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಎಚ್ಚರಿಕೆ ನೀಡಿದರು. ನಗರದ ಅವಧಾನಿ ಬಡಾವಣೆಯಲ್ಲಿ ಸೋಮವಾರ ಸಪ್ತಪದಿ ಕಲ್ಯಾಣ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕುಂಚಿಟಿಗ ಜನಾಂಗದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯರು ಮುಂದೆ ನಿಂತು ಒಪ್ಪಿ ಮಾಡುತ್ತಿದ್ದ ಮದುವೆಗಳಿಗೆ ಮಹತ್ತರವಾದ ಅರ್ಥವಿರುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಹೊಂದಿಕೊಂಡು ಹೋಗುವ ಸಂಸ್ಕಾರವನ್ನು ಕಲಿಸಲಾಗುತ್ತಿತ್ತು. ಆದರೆ, ಈಗೀಗ ಪ್ರೀತಿ-ಪ್ರೇಮದ ಸುಳಿಗೆ ಸಿಕ್ಕಿರುವ ಯುವಪೀಳಿಗೆ ಬದುಕಿನ ಅರ್ಥವನ್ನು ಗ್ರಹಿಸುವುದರಲ್ಲಿ ಎಡವುತ್ತಿರುವುದು ಎದ್ದು ಕಾಣುತ್ತಿದೆ. ವಿಚ್ಛೇದನಗಳು ಹೆಚ್ಚುತ್ತಿವೆ.ಈ ಬಗ್ಗೆ ಯುವಜನರು ಗಂಭೀರ ಚಿಂತನೆ ನಡೆಸಬೇಕಿದೆ. ವಿದ್ಯೆಯ ಜತೆ ಸಮಾಜದಲ್ಲಿ ಹೊಂದಿಕೊಂಡು ಬಾಳುವ ಸಂಸ್ಕಾರವೂ ಅತ್ಯಗತ್ಯ ಎನ್ನುವುದನ್ನು ತಿಳಿಯಬೇಕಿದೆ ಎಂದು ಅವರು ಹೇಳಿದರು. ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ನಡೆಸುತ್ತಿದ್ದ ಕುಂಚಿಟಿಗ ಜನಾಂಗದ ಸಮಾವೇಶವನ್ನು ಬರುವ ವರ್ಷದಿಂದ ಜನವರಿ ತಿಂಗಳಲ್ಲಿ ನಡೆಸಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಆಡಂಬರದ ಮದುವೆಗಳಿಂದ ಎಷ್ಟೋ ಸಂಸಾರಗಳು ಸಾಲದ ಸುಳಿಗೆ ಸಿಕ್ಕಿ ಹಾಳಾಗಿವೆ. ಕೆಲವು ವರ್ಷಗಳ ಹಿಂದೆ ಸಂಬಂಧಿಗಳಲ್ಲಿಯೇ ಹೆಣ್ಣು-ಗಂಡು ಹುಡುಕಿ ಮದುವೆ ಮಾಡಲಾಗುತ್ತಿತ್ತು. ಆದರೆ, ಈಗ ಮದುವೆ ಆಯ್ಕೆಯ ಪ್ರಶ್ನೆ ಆಗಿದೆ. ಹೆಣ್ಣು-ಗಂಡು ಒಪ್ಪಿದ ಕಡೆ ಮದುವೆ ಮಾಡುವ ವ್ಯವಸ್ಥೆ ಬಂದಿದೆ. ಹೀಗಾಗಿ, ವಧು-ವರರ ಅನ್ವೇಷಣ ಕೇಂದ್ರಗಳು ಅನಿವಾರ್ಯ ಎಂಬಂತಾಗಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಎಂ. ಜಯಣ್ಣ ಹೇಳಿದರು.

ಎಂ.ಡಿ. ಗೌಡ, ಆಲೂರು ಎಂ ವೀರಣ್ಣ, ಹುಚ್ಚವ್ವನಹಳ್ಳಿ ಅವಿನಾಶ್, ಅಶೋಕ್, ಎಂ.ಎಲ್. ಗಿರಿಧರ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.