ವನಕಲ್ಲು ವೃದ್ಧಾಶ್ರಮ ಉದ್ಘಾಟನೆ

7

ವನಕಲ್ಲು ವೃದ್ಧಾಶ್ರಮ ಉದ್ಘಾಟನೆ

Published:
Updated:

ಬೆಂಗಳೂರು:  ನಗರದ ದಾಬಸ್‌ಪೇಟೆಯ ವನಕಲ್ಲುವಿನಲ್ಲಿ ವೃದ್ಧಾಶ್ರಮವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗೆ ಉದ್ಘಾಟಿಸಿದರು.ವನಕಲ್ಲು ಕ್ಷೇತ್ರದ ಬಸವ ರಮಾನಂದ ಸ್ವಾಮೀಜಿ, ಜಯಮಹಲ್ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಭೋಜರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜಯಮಹಲ್ ಲಯನ್ಸ್ ಕ್ಲಬ್ ವತಿಯಿಂದ 12 ಕೊಠಡಿಗಳುಳ್ಳ ಕಟ್ಟಡವನ್ನು ವನಕಲ್ಲು ಕ್ಷೇತ್ರಕ್ಕೆ ದಾನ ಮಾಡಲಾಗಿತ್ತು. ಇದಕ್ಕೆ 65 ಲಕ್ಷ ರೂಪಾಯಿ ವೆಚ್ಚ ತಗುಲಿದೆ. 30ಕ್ಕೂ ಅಧಿಕ ವೃದ್ಧರು ಇಲ್ಲಿ ವಾಸ್ತವ್ಯ ಹೂಡಬಹುದು ಎಂದು ಲಯನ್ಸ್ ಕ್ಲಬ್ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry