ಗುರುವಾರ , ಅಕ್ಟೋಬರ್ 24, 2019
21 °C

ವನ್ಯಜೀವಿ ಧಾಮ ಘೋಷಣೆ ವಿರೋಧಿಸಿ ಹೈಕೋರ್ಟ್ ಮೊರೆ

Published:
Updated:

ಚಿಂಚೋಳಿ:  ತಾವು ಮುಂಬರುವ ವಿಧಾನ ಸಭೆ ಚುನಾವಣೆಗೆ ಚಿಂಚೋಳಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಇದಕ್ಕಾಗಿ ಅಗತ್ಯ ತಯಾರಿ ನಡೆಸುತ್ತಿದ್ದೇನೆ ಎಂದು ಜೆಡಿಎಸ್‌ನ ಹೈದರಾಬಾದ ಕರ್ನಾಟಕ ಕೋರ್ ಕಮಿಟಿ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ಗೆ ನಾನು ಹೊಸಬನಲ್ಲ. ವಿದ್ಯಾರ್ಥಿ ಜನತಾ ದಳ, ಯುವ ಜನತಾ ದಳದಲ್ಲಿ ಜಿಲ್ಲಾ ರಾಜ್ಯ ಮಟ್ಟದ ವಿವಿಧ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ.ಪಕ್ಷದ ನಾಯಕರ ಅಣತಿಯಂತೆ ಚಿಂಚೋಳಿಯಲ್ಲಿ ಪಕ್ಷ ಸಂಘಟಿಸುತ್ತಿದ್ದೇನೆ. ವರೀಷ್ಠರು ಟಿಕೆಟ್ ನೀಡಿದರೆ ಕಣದಲ್ಲಿರುತ್ತೇನೆ ಇಲ್ಲದಿದ್ದರೆ ಪಕ್ಷ ಯಾರನ್ನು ಕಾಣಕ್ಕೆ ಇಳಿಸುತ್ತದೆಯೋ ಅವರನ್ನು ಬೆಂಬಲಿಸುತ್ತೇನೆ ಇದರಲ್ಲಿ ಅನುಮಾನ ಬೇಡ ಎಂದರು.ಜೆಡಿಎಸ್ ತಾಲ್ಲೂಕಿನಲ್ಲಿ ಒಂದು ದೊಡ್ಡ ಶಕ್ತಿಯಾಗಿದೆ. ಅಲ್ಲಿ ಒಡಕಿನ ಮಾತಿಲ್ಲ ಎಂದ ಅವರು ನನ್ನ ರಾಜಕೀಯ ಗುರು ವೈಜನಾಥ ಪಾಟೀಲ್. ನನ್ನ ನಾಯಕ ಎಚ್.ಡಿ ಕುಮಾರಸ್ವಾಮಿ ಎಂದರು. ಪಕ್ಷದ ನಾಯಕರು ಕ್ಷೇತ್ರದ ಜನರ ಹಾಗೂ ಜೆಡಿಎಸ್ ಕಾರ್ಯಕರ್ತರ ಆಪೇಕ್ಷೆಯಂತೆ ನಡೆಯುತ್ತಾರೆ. ಹೀಗಾಗಿ ಜನರ ಬೆಂಬಲ ತಮಗಿದೆ ಅದಕ್ಕಾಗಿ ಚುನಾವಣೆಗೆ ತಯಾರಿ ನಡೆಸುತ್ತಿದ್ದೇನೆ ಎಂದರು.ಹೈಕೋರ್ಟ್ ಮೊರೆ: ಕೊಂಚಾವರಂ ಕಾಯ್ದಿಟ್ಟ ಅರಣ್ಯವನ್ನು ವನ್ಯಜೀವಿ ಧಾಮ ಘೋಷಣೆಗೆ ತಮ್ಮ ವಿರೋಧವಿತ್ತು. ಅದನ್ನು ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ ಶಾಸಕ ಸುನೀಲ ವಲ್ಯ್‌ಪುರ ತಮ್ಮ ಬಗ್ಗೆ ಹಾಗೂ ವನ್ಯಜೀವಿ ಧಾಮದ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನರಿಗೆ ದಾರಿ ತಪ್ಪಿಸಿದರು ಎಂದು ಆರೋಪಿಸಿದರು.ರಾಜ್ಯ ಸರ್ಕಾರದಿಂದ ಅಧಿಸೂಚನೆಗಾಗಿ ಕಾಯಲಾಗುತ್ತಿತ್ತು. ಈಗ ಅಧಿಸೂಚನೆ ಹೊರ ಬಿದ್ದಿದೆ. ಜನವರಿ ಮಾಸಾಂತ್ಯದೊಳಗಾಗಿ ತಾವು ಈ ಭಾಗದ ಜನರ ಹಿತ ಗಮನದಲ್ಲಿಟ್ಟುಕೊಂಡು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೋಡ್ಲಿಯ ಶಾಮ ರಾಠೋಡ್, ನಾಗೇಶ ರಾಠೋಡ್, ಧನರಾಜ ರಾಠೋಡ್, ಕಾಶಿನಾಥ ಕಂದಗೂಳ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)