ವನ್ಯಜೀವಿ ಬೇಟೆ ಇಳಿಮುಖ: ಪನ್ವಾರ

7

ವನ್ಯಜೀವಿ ಬೇಟೆ ಇಳಿಮುಖ: ಪನ್ವಾರ

Published:
Updated:
ವನ್ಯಜೀವಿ ಬೇಟೆ ಇಳಿಮುಖ: ಪನ್ವಾರ

ಕಾರವಾರ: ವನ್ಯಜೀವಿ ಬೇಟೆಯ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗು ತ್ತಿದ್ದು ಬೇಟೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ ನಾಲ್ಕೇ ಬೇಟೆ ಪ್ರಕರಣಗಳು ನಡೆದಿವೆ ಎಂದು ದಾಂಡೇಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನಿಲ ಪನ್ವಾರ ಹೇಳಿದ್ದಾರೆ.ಕಳೆದೆರಡು ವರ್ಷಗಳಿಂದ 52 ಗ್ರಾಮಗಳ ಸುಮಾರು 2000 ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ ಹಾಗೂ ಮಹತ್ವ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ಬೇಟೆ ನಡೆಯು ವುದನ್ನು ನಿಯಂತ್ರಿಸಲು 12 ಕೇಂದ್ರ ಗಳನ್ನು ತೆರೆಯಲಾಗಿದೆ. ನರಸಿಂಹ ಛಾಪಖಂಡ, ರವಿ ಡೇರೆಕರ, ಸುದರ್ಶನ ಹೆಗಡೆ, ಅಶ್ವಥ ಹೆಗಡೆ ಅವರನ್ನೊಳ ಗೊಂಡ ಯುವಪಡೆ ಗ್ರಾಮಗಳಲ್ಲಿ ಸಂಚರಿಸಿ ಬೀದಿ ನಾಟಕಗಳನ್ನು ಪ್ರದರ್ಶಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದ್ದಾರೆ.ವನ್ಯಜೀವಿ ವಿಧಿ ವಿಜ್ಞಾನ ಕಾರ್ಯಾ ಗಾರ:  ವನ್ಯಜೀವಿ ಸಂರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು, ಫೆ. 17ರಂದು ವನ್ಯಜೀವಿಗಳ ಕಳ್ಳ ಸಾಗಣೆ, ವ್ಯಾಪಾರ- ವಿಧಾನಗಳು ಖೊಟ್ಟಿ ಚರ್ಮಗಳ ಗುರುತಿಸುವಿಕೆ ಕುರಿತಂತೆ ಫೆ. 17 ರಂದು ದಾಂಡೇಲಿ ಹತ್ತಿರದ ಕುಳಗಿ ನೇಚರ್ ಕ್ಯಾಂಪ್‌ನಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಮಟ್ಟದ ವನ್ಯಜೀವಿ ವಿಧಿ ವಿಜ್ಞಾನ ಕಾರ್ಯಾಗಾರ (ವೈಲ್ಡ್ ಲೈಫ್ ಫೊರೆನ್ಸಿಕ್ ವರ್ಕಶಾಪ್) ಹಮ್ಮಿ ಕೊಳ್ಳಲಾಗಿದೆ ಎಂದು ಪನ್ವಾರ ಹೇಳಿದ್ದಾರೆ.ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಿ.ಕೆ.ಸಿಂಗ್ ಕಾರ್ಯಾಗಾರ ಉದ್ಘಾಟಿಸ ಲಿದ್ದಾರೆ. ಸರ್ವೋಚ್ಛ ನ್ಯಾಯಾಲಯ    ದಲ್ಲಿ ಪರಿಸರಪರ ಪ್ರಕರಣಗಳ ವಕಾಲತ್ತು ನಡೆಸುವ ವಕೀಲ ರಿಕ್ವಿತ್ ದತ್ತಾ, ವೈಲ್ಡ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಡಾ. ಎಸ್.ಪಿ. ಗೋಯಲ್ ಹಾಗೂ ಟ್ರಾಫಿಕ್ ಇಂಡಿ ಯಾದ ಮುಖ್ಯಸ್ಥ ಸಮೀರ್ ಸಿನ್ಹಾ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry