ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರಲ್ಲಿ ಬೆನ್ನುಹುರಿ ಶಸ್ತ್ರಚಿಕಿತ್ಸೆ

Last Updated 24 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಬೆನ್ನುನೋವು ಮತ್ತು ಕತ್ತು ನೋವು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುವ ಸಮಸ್ಯೆ. ಶೇ 60ರಷ್ಟು ವಯಸ್ಕರು ಬೆನ್ನುನೋವು ಇಲ್ಲವೇ ಕತ್ತುನೋವಿನಿಂದ ಬಳಲುತ್ತಾರೆ. ಕನಿಷ್ಠ ಒಂದಕ್ಕಾದರೂ ವೈದ್ಯಕೀಯ ಚಿಕಿತ್ಸೆ ಪಡೆಯುವಷ್ಟು ಗಂಭೀರವಾಗಿ ಇರುತ್ತದೆ. ವಯಸ್ಕರಾದಂತೆ ಬೆನ್ನುಮೂಳೆ ತನ್ನ ಗಡಸುತನವನ್ನು ಕಳೆದುಕೊಳ್ಳಲಿದ್ದು, ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಸ್ಪಾಂಡಿಲೊಸಿಸ್’ ಎನ್ನುತ್ತಾರೆ. ಇದು, ಈ ಎರಡು ಸಮಸ್ಯೆಗಳಿಗೂ ಮೂಲಕಾರಣ. ಇತರ ಕಾರಣವೆಂದರೆ ಬೆನ್ನುಮೂಳೆಯಲ್ಲಿ ಮಾಂಸದ ಗಡ್ಡೆ ಬೆಳೆಯುವುದು.

ಬೆನ್ನುನೋವಿನ ಬಹುದೊಡ್ಡ ಸಮಸ್ಯೆ ಎಂದರೆ ನೋವು ಸ್ಥಿರವಾಗಿರುತ್ತದೆ. ಜೊತೆಗೆ, ಹೃದಯ ಸಮಸ್ಯೆ, ಮಧುಮೇಹ, ಮಾನಸಿಕ ಒತ್ತಡ ಇದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ವಯಸ್ಕರಲ್ಲಿ ಇಂಥ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರಿಂದ ದೈಹಿಕ ಆರೋಗ್ಯಕ್ಕೆ ಅಷ್ಟೇ ಅಲ್ಲದೆ ವ್ಯಕ್ತಿಗವಾಗಿಯೂ ಸಮಸ್ಯೆಯೇ.ಏಕೆಂದರೆ, ಇಂಥ ಸಮಸ್ಯೆ ಇದ್ದಾಗ ಸಾಮಾಜಿಕ, ಆರ್ಥಿಕವಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಬೆನ್ನುಹುರಿ ನೋವಿಗೆ ಕಾರಣಗಳು
ಮಾಂಸದಲ್ಲಿ ನೋವು: ವಯಸ್ಕರಾದಂತೆ ಮೂಳೆಗಳು ಗಡಸುತನವನ್ನು ಕಳೆದುಕೊಳ್ಳಲಿದ್ದು, ಕೀಲುಗಳು ಕಿರಿದಾಗುತ್ತವೆ. ಆಗ ಮಾಂಸದ ಮೇಲೆ ಹೆಚ್ಚಿನ ಒತ್ತಡ ಬೀಳಲಿದ್ದು, ದಿನನಿತ್ಯದ ಚಟುವಟಿಕೆಗಳ ನಡುವೆ ಗಾಯವು ಆಗಬಹುದು. ಬಹತೇಕ ಸಂದರ್ಭದಲ್ಲಿ ಬೆನ್ನುಹುರಿ ನೋವಿಗೆ ಬೆನ್ನುಹುರಿಯ ಕೆಳಭಾಗದಲ್ಲಿನ ಮಾಂಸದ ಬೆಳವಣಿಗೆ ಕಾರಣವಾಗುತ್ತದೆ.  ಅಲ್ಲದೆ, ಜ್ವರದಂಥ ಸೋಂಕುಗಳು ಹಾಗೂ ಬೆನ್ನು, ಕತ್ತು ನೋವು ಕಾಣಿಸಿಕೊಳ್ಳಲಿದೆ.

ಬೆನ್ನುಮೂಳೆ ಗಡಸುತನ ಕಳೆದುಕೊಳ್ಳುವುದು:
 ಬೆನ್ನುಹುರಿ ಎಂಬುದು ಮೂಳೆಗಳ ಜೋಡಣೆ. ಇದು ಪರಸ್ಪರ ಜೋಡಿಯಾಗಿದ್ದು, ಎರಡರ ನಡುವೆ ವೈದ್ಯಕೀಯ ಭಾಷೆಯಲ್ಲಿ ‘ಇಂಟರ್‌ವರ್ಟಿಬ್ರಲ್’ ಎಂದು ಹೇಳಲಾಗುವ ಚಿಪ್ಪು ಇರುತ್ತದೆ. ಅದೇ ರೀತಿ ಕೀಲುಗಳ ಬಳಿಯೂ ಇಂಥ ಚಿಪ್ಪು ಇರುತ್ತದೆ. ಈ ಚಿಪ್ಪುಗಳು ಬೆನ್ನುಹುರಿಗೆ ವಾಹನದಲ್ಲಿನ ಷಾಕ್ ಅಬ್ಸರ್ವರ್ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಬಾಗಲು, ತಿರುಗಲು ನೆರವಾಗಲಿದೆ. ನಿತ್ಯದ ಚಟುವಟಿಕೆಗಳಲ್ಲಿ ಒತ್ತಡ ಬೀಳಲಿದ್ದು, ವಯಸ್ಕರಾಗುತ್ತಿದ್ದಂತೆ ದುರ್ಬಲಗೊಳ್ಳುತ್ತಾ ಹೋಗುತ್ತವೆ. ಇಂಥ ಸಮಸ್ಯೆ ಬೆನ್ನುಹುರಿಯಲ್ಲಿ ಪೂರ್ಣ ಕಾಣಿಸಿಕೊಳ್ಳಬಹುದು. ಆದರೆ, ಬಹುತೇಕ ಇದು ಬೆನ್ನಹುರಿಯ ಕೆಳಭಾಗ ಹಾಗೂ ಕತ್ತಿನ ಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಮಧ್ಯ ವಯಸ್ಕದ ಅವಧಿಯಲ್ಲಿ ಈ ಸಮಸ್ಯೆಗೆ ಬಹುತೇಕ ಕಾರಣ ಆಗುವುದು ಮಾಂಸದ ಅಂಶ ಬೆಳೆಯುವುದರಿಂದಲೇ. ಅಲ್ಲದೆ, ದೈಹಿಕ ಚಲನೆಯಿಂದಲೂ ಈ ನೋವು ಕಾಣಿಸಿಕೊಳ್ಳಲಿದೆ.

ಮೂಳೆ ಗಡಸುತನ ಕಳೆದುಕೊಳ್ಳುವ ವಿವಿಧ ಹಂತಗಳು:
*ಡಿಸ್ಕ್‌ಗಳಲ್ಲಿ ನೀರಿನ ಅಂಶ ಕಡಿಮೆಯಾಗಿ ಕುಗ್ಗಲಿದ್ದು, ಗಡಸುತನ ಕಳೆದುಕೊಳ್ಳಲಿದ್ದು, ಚಲನೆಯ ವೇಳೆ ನೋವು ಕಾಣಿಸಿಕೊಳ್ಳಲಿದೆ. ಗಾಯದ ಸಂದರ್ಭದಲ್ಲಿ ಇದು ತ್ವರಿತಗತಿಯಲ್ಲಿ ಕಾಣಿಸಿಕೊಳ್ಳಬಹುದು.
*ಹೆಚ್ಚು ಭಾರ ಅಥವಾ ಗಾಯದಿಂದಾಗಿ ಮುಂಭಾಗದ ಕೀಲುಗಳ ಮೇಲ ಒತ್ತಡ ಬಿದ್ದು, ಬೆನ್ನುಮೂಳೆಯ ಸರಾಗ ಚಲನೆಗೆ ಅಡ್ಡಿಯಾಗಬಹುದು.
*ವಯಸ್ಕರಾದಂತೆ ಗಡಸುತನ ಕಳೆದುಕೊಂಡು, ಸವೆತದಿಂದ ಮೂಳೆಯ ಗಾತ್ರ ಚಿಕ್ಕದಾಗಲಿದ್ದು, ಬೆನ್ನುಮೂಳೆಯ ಎತ್ತರ ಕುಗ್ಗಲಿದೆ. ಮೂಳೆಗಳು ಪರಸ್ಪರ ಕುಗ್ಗಲಿದ್ದು, ಈ ಪ್ರಕ್ರಿಯೆಗೆ ವೈದ್ಯಕೀಯ ಭಾಷೆಯಲ್ಲಿ ಸ್ಟೆನೊಸಿಸ್ ಎಂದು ಗುರುತಿಸಲಾಗುತ್ತದೆ.
*ಡಿಸ್ಕ್‌ನ ಭಾಗಶಃ ಕುಸಿತದಿಂದಲೂ ಸ್ಟೆನೊಸಿಸ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದರಿಂದ ಬೆನ್ನುನೋವು, ಕತ್ತು ನೋವು ಜೊತೆಗೆ ಕಾಲಿನಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ನೋವು ತೋಳುಗಳಿಗೂ ವ್ಯಾಪಿಸಲಿದೆ.
*ವೈದ್ಯಕೀಯ ಭಾಷೆಯಲ್ಲಿ ಸ್ಪಾಂಡಿಲೊಸಿಸ್ಟೆತೆಸಿಸ್ ಎಂದು ಹೇಳಲಾಗುವ ಸಮಸ್ಯೆಗೆ ಒಂದು ಮೂಳೆಯು ಇನ್ನೊಂದರ ಮೇಲೆ ಕುಸಿಯುವುದರಿಂದ ಆಗುವ ಸಮಸ್ಯೆ.
*ಇಂಥದೇ ಸಮಸ್ಯೆ ಬಹು ಹಂತಗಳಲ್ಲಿ ಕಾಣಿಸಿಕೊಂಡಾಗ ನರಗಳು ಹಿಡಿದುಕೊಳ್ಳಲಿದ್ದು, ಬೆನ್ನುನೋವು ಹೆಚ್ಚಾಗಲಿದೆ.
*ಚಿಪ್ಪಿನ (ಡಿಸ್ಕ್) ಹೊರ ಭಾಗದಲ್ಲಿ ಬಿರುಕು ಮೂಡುವುದು, ಸಣ್ಣದಾದ ಗಾಯ ಉಂಟಾಗುವುದರಿಂದ ಡಿಸ್ಕ್‌ನ ಒಳಗಿರುವ ಜೆಲ್ಲಿ ರೀತಿಯ ದ್ರವ ಹೊರಬರುತ್ತದೆ. ಇದರಿಂದ ಚಿಪ್ಪಿನಲ್ಲಿ ಊತ ಕಾಣಿಸಿಕೊಳ್ಳಲಿದೆ.
*ಈ ಬದಲಾವಣೆ ಸಾಮಾನ್ಯವಾಗಿ-ಹೆಚ್ಚಿನ ದೈಹಿಕ ಶ್ರಮ ವಹಿಸುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳಲಿದೆ.
*ಬೊಜ್ಜು ಇರುವ, ದಪ್ಪನೆಯ ವ್ಯಕ್ತಿಗಳಲ್ಲಿ ಇಂಥ ಸಮಸ್ಯೆ ಕಾಣಿಸಿಕೊಳ್ಳಲಿದೆ.
*ಚಿಪ್ಪಿಗೆ ಹೆಚ್ಚಿನ ಪೆಟ್ಟು ಉಂಟಾಗುವ ಗಾಯಗಳಾದ ಸಂದರ್ಭಗಳು.
ಸಾಮಾನ್ಯವಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುವ ಇತರ ಬೆನ್ನಹುರಿ ಸಮಸ್ಯೆಗಳು:

*ಎಲುಬುರೋಗದಿಂದಾಗಿ ಮೂಳೆಗಳು ದುರ್ಬಲಗೊಳ್ಳುವುದು. ಇದು, ವಯಸ್ಕರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ.
*ಇದು, ಬೆನ್ನುಹುರಿ ಸೇರಿದಂತೆ ದೇಹದ ವಿವಿಧೆಡೆ ನೋವು ಉಂಟು ಮಾಡಲಿದೆ.
*ಪುನರಾವರ್ತಿತವಾಗಿ ಬೀಳುವುದರಿಂದ ಆಗುವ ಗಾಯ, ಬೆನ್ನುಹುರಿಯ ಸವೆತಕ್ಕೆ ಕಾರಣವಾಗಲಿದೆ.

ಇಂಥ ಸಮಸ್ಯೆ ಸಾಮಾನ್ಯ:
ಬೆನ್ನುಹುರಿ ನೋವು ವಯೋಸಹಜವಾಗಿದ್ದು, ಗಾಯ, ನೋವಿನಿಂದ ಚಲನೆಯ ಮೇಲೂ ಪರಿಣಾಮ ಬೀರಲಿದೆ.
ವಯಸ್ಕರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಇಂಥ ಸಮಸ್ಯೆಗಳು ಹಾಗೂ ಪೂರಕ ಅನಾರೋಗ್ಯ ಸಮಸ್ಯೆಗಳು ಈ ವರ್ಗದ ವಯಸ್ಕರಲ್ಲಿ ಹೆಚ್ಚುತ್ತಿವೆ.
ಸಾಮಾನ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ವಯಸ್ಕರಾದಂತೆ ಗಾಯ, ಬಿರುಕಿನ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ವಯಸ್ಕರು ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಬೊಜ್ಜು ಮತ್ತಿತರ ಸಮಸ್ಯೆಗಳಿಂದಲೂ ಬಳಲುತ್ತಾರೆ.
ಬೆನ್ನುಮೂಳೆ ಸಾಮಾನ್ಯವಾಗಿ ವ್ಯಕ್ತಿಯ ಚಲನೆಯನ್ನು ಕಡಿಮೆ ಮಾಡಿಸುತ್ತದೆ.
ಇದು, ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆಗಳ ಮೇಲೂ ಪರಿಣಾಮ ಬೀರುವ ಕಾರಣ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ.  ಸಕಾಲದಲ್ಲಿ ಶಸ್ತ್ರಚಿಕಿತ್ಸೆಯನ್ನು ಪಡೆದುಕೊಳ್ಳುವುದು ವ್ಯಕ್ತಿಯ ಜೀವನಮಟ್ಟವನ್ನು ಸುಧಾರಿಸಲಿದೆ.

ಚಿಕಿತ್ಸೆಯ ಆಯ್ಕೆಗಳು:
*ಬೆನ್ನುಮೂಳೆಯ ಕೆಳಭಾಗದಲ್ಲಿನ ನೋವು ಶಮನಕ್ಕಾಗಿ ರೇಡಿಯೋ ಫ್ರೀಕ್ವೆನ್ಸಿ ಫೆಸೆಟ್.
*ಫೆಸೆಟ್ ಬ್ಲಾಕ್ಸ್: ಕೀಲುಗೆ ಇಂಜೆಕ್ಷನ್ ಮೂಲಕ ಔಷಧವನ್ನು ನೀಡುವ ವಿಧಾನ.
*ಫಿಸಿಯೋಥೆರಫಿ ಮತ್ತು ನೋವು ಶಮನ ಕಾರ್ಯಗಳು. ಇದರಿಂದ ದೀರ್ಘಾವಧಿಯ ಅನುಕೂಲ.

ಶಸ್ತ್ರಚಿಕಿತ್ಸೆಯ ಆಯ್ಕೆಗಳು:
*ಬೆನ್ನುಹುರಿ ಮತ್ತು ನರಗಳ ಮೇಲಿನ ಒತ್ತಡ ಕಡಿಮೆ ಮಾಡಲು ಶಸ್ತ್ರಚಿಕಿತ್ಸೆ. ಇಲ್ಲಿ, ಹೆಚ್ಚುವರಿಯಾಗಿ ಮೂಳೆ ಕಸಿ ಮಾಡುವ ಸಾಧ್ಯತೆಯೂ ಇದ್ದು, ಕನಿಷ್ಠ 72 ಗಂಟೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ.
*ಮೂಳೆ ಗಡಸುತನ ಪಡೆಯುವ ಆರಂಭಿಕ ಹಂತದಲ್ಲಿ ಪರಸ್ಪರ ಕುಸಿತ ತಡೆಗಟ್ಟಲು ಚಿಕಿತ್ಸೆ.
ವಯಸ್ಕರಲ್ಲಿ ಬೆನ್ನು ಹುರಿ ಶಸ್ತ್ರಚಿಕಿತ್ಸೆಗಾಗಿ ಪರಿಪೂರ್ಣ ತಂಡದ ಅಗತ್ಯವಿದ್ದು, ಮಧು ಮೇಹ, ಒತ್ತಡ, ಹೃದಯ ಸಂಬಂಧಿ ಸಮಸ್ಯೆಗಳಿಗೂ ಸ್ಪಂದಿಸುವ ಅಗತ್ಯ ಸೌಲಭ್ಯಗಳನ್ನು ಹೊಂದಿರುವುದು ಅಗತ್ಯ.
ಲೇಖಕರ ದೂರವಾಣಿ
080- 66214444
     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT