ವಯಸ್ಸಿಗೂ ಮುಂಚೆ ಹರೆಯಕ್ಕೆ!

7

ವಯಸ್ಸಿಗೂ ಮುಂಚೆ ಹರೆಯಕ್ಕೆ!

Published:
Updated:

ವಾಷಿಂಗ್ಟನ್ (ಪಿಟಿಐ):  ಅಮೆರಿಕದಲ್ಲಿ ಹುಡುಗಿಯರಷ್ಟೇ ಅಲ್ಲದೆ ಹುಡುಗರು ಕೂಡ ಸಾಮಾನ್ಯ ವಯಸ್ಸಿಗಿಂತ ಒಂದು ಅಥವಾ ಎರಡು ವರ್ಷ ಮೊದಲೇ ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಾರೆ ಎಂದು ಹೊಸ ಅಧ್ಯಯನದಿಂದ  ತಿಳಿದು ಬಂದಿದೆ.ಉತ್ತರ ಕರೋಲಿನದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿವಿಯ ಮಾರ್ಕಿಯ ಹರ್ಮನ್ ಗಿಡ್ಡನ್ಸ್ ನೇತೃತ್ವದ ತಂಡ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಅಧ್ಯಯನದ ಪ್ರಕಾರ, ವೈದ್ಯಕೀಯ ಗುಣಮಟ್ಟ ನಿಗದಿ ಪಡಿಸಿರುವ ವಯಸ್ಸಿಗಿಂತ ಅಮೆರಿಕದಲ್ಲಿ ಹುಡುಗರು ಆರರಿಂದ ಎರಡು ವರ್ಷಗಳ ಮೊದಲೇ ಯೌವ್ವನಾವಸ್ಥೆ ತಲುಪುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry