ವಯಸ್ಸಿನ ಅಂತರ ಮರೆಸಿದ ದಸರಾ ಓಟ ಸ್ಪರ್ಧೆ

7

ವಯಸ್ಸಿನ ಅಂತರ ಮರೆಸಿದ ದಸರಾ ಓಟ ಸ್ಪರ್ಧೆ

Published:
Updated:

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ದಸರಾ ಉತ್ಸವದ ಎರಡನೇ ದಿನವಾದ ಭಾನುವಾರ ಬೆಳಿಗ್ಗೆ ದಸರಾ ಓಟದ ಸಂಭ್ರಮ ಕಳೆಗಟ್ಟಿತ್ತು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 3 ವರ್ಷದ ಪುಟಾಣಿಗಳಿಂದ 80 ವರ್ಷದ ಹಿರಿಯ ನಾಗರಿಕರು ಓಟದ ಸಂಭ್ರಮದಲ್ಲಿ ಪಾಲ್ಗೊಂಡರು.ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಕ್ಷಿತಾ- ಪ್ರಥಮ, ಸ್ನೇಹ- ದ್ವಿತೀಯ, ರಾಜಲಕ್ಷ್ಮಿ- ತೃತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಸಂತೋಷ್, ಶಿವಪ್ರಕಾಶ್ ಹಾಗೂ ಸುಮನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಬಾಲಕಿಯರ ಸ್ಪರ್ಧೆಯಲ್ಲಿ ಪ್ರಫುಲ್ಲ- ಪ್ರಥಮ, ಸಹನಾ- ದ್ವಿತೀಯ ಹಾಗೂ ಸುಶ್ಮಿತಾ ಮೂರನೇ ಸ್ಥಾನ ಗಳಿಸಿದರು.ಬಾಲಕರ ವಿಭಾಗದಲ್ಲಿ ಸಂಜಯ್- ಪ್ರಥಮ, ಶರತ್‌ಗೌಡ- ದ್ವಿತೀಯ ಹಾಗೂ ಹೊಯ್ಸಳ ತೃತೀಯ ಬಹುಮಾನ ಪಡೆದರು. 18ರಿಂದ 35 ವರ್ಷದವರ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ನೇತ್ರಾವತಿ- ಪ್ರಥಮ, ರಶ್ಮಿ- ದ್ವಿತೀಯ ಹಾಗೂ ಶಾಲಿನಿ- ತೃತೀಯ; ಪುರುಷರ ವಿಭಾಗದಲ್ಲಿ ಸಂಜು- ಪ್ರಥಮ, ದರ್ಶನ್- ದ್ವಿತೀಯ ಹಾಗೂ ಅಭಿತ್ ತೃತೀಯ ಸ್ಥಾನ ಗಳಿಸಿದರು.35 ರಿಂದ 45 ವರ್ಷದವರ ಸ್ಪರ್ಧೆಯಲ್ಲಿ ಶೋಭಾ ಕುಮಾರಸ್ವಾಮಿ- ಪ್ರಥಮ, ಪ್ರತಿಮಾ- ದ್ವಿತೀಯ, ಉಷಾ- ತೃತೀಯ; ಪುರುಷರ ಸ್ಪರ್ಧೆಯಲ್ಲಿ ಮಹದೇವು- ಪ್ರಥಮ, ರಮೇಶ್-ದ್ವಿತೀಯ ಹಾಗೂ ರಾಜು ಮೂರನೇ ಸ್ಥಾನ ಪಡೆದರು. 45-60 ವರ್ಷದವರ ಸ್ಪರ್ಧೆಯಲ್ಲಿ ತಾರಾದೇವಿ- ಪ್ರಥಮ, ಜಯಮ್ಮ- ದ್ವಿತೀಯ, ಹೊನ್ನಮ್ಮ- ತೃತೀಯ; ಪುರುಷರ ವಿಭಾಗದಲ್ಲಿ ಶಿವಕುಮಾರ್- ಪ್ರಥಮ, ಅಪ್ಪಾಜಿ- ದ್ವಿತೀಯ ಹಾಗೂ ಉಮೇಶ್ ಮೂರನೇ ಸ್ಥಾನ ಗಳಿಸಿದರು.ಹಿರಿಯ ನಾಗರಿಕ ವಿಭಾಗದಲ್ಲಿ ಸೋಮಣ್ಣ- ಪ್ರಥಮ, ಸೀತಾರಾಮು- ದ್ವಿತೀಯ, ವಿಜೇಂದ್ರು ತೃತೀಯ ಸ್ಥಾನ ಪಡೆದರು. ಅಂಗವಿಕಲರ ಸ್ಪರ್ಧೆಯಲ್ಲಿ ಅರುಣ್- ಪ್ರಥಮ, ಬಸವರಾಜು- ದ್ವಿತೀಯ ಹಾಗೂ ಮಂಜುನಾಥ್ ಮೂರನೇ ಸ್ಥಾನ ಪಡೆದರು. ಬಾಲ ಪ್ರತಿಭೆ ವಿಭಾಗದಲ್ಲಿ ಎಸ್.ಲೇಖನ -ಪ್ರಥಮ, ಅದಿತಿ- ದ್ವಿತೀಯ ಹಾಗೂ ಭಾರ್ಗವಿ- ತೃತೀಯ ಬಹುಮಾನ ಗಳಿಸಿದರು.ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ದಸರಾ ಓಟಕ್ಕೆ ಚಾಲನೆ ನೀಡಿದರು. ಉಪ ವಿಭಾಗಾಧಿಕಾರಿ ಲತಾ, ತಹಶೀಲ್ದಾರ್ ಅರುಳ್‌ಕುಮಾರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry