ಮಂಗಳವಾರ, ನವೆಂಬರ್ 19, 2019
23 °C

`ವಯಸ್ಸು ಪ್ರಮುಖ ವಿಷಯವಲ್ಲ'

Published:
Updated:

ಕೋಲ್ಕತ್ತ (ಪಿಟಿಐ): `ವಯಸ್ಸು ಎಂಬುದು ಪ್ರಮುಖ ವಿಷಯವಲ್ಲ. ನಾನು ಎಲ್ಲಿಯವರೆಗೆ ಆಟವನ್ನು ಆನಂದಿಸುವೆನೋ, ಅಲ್ಲಿವರೆಗೆ ನನ್ನ ದೇಹ ಹಾಗೂ ಮನಸ್ಸು ಜೊತೆಯಾಗಿಯೇ ಮುಂದೆ ಸಾಗುತ್ತದೆ' ಎಂದು ಸಚಿನ್ ಹೇಳಿದ್ದಾರೆ.ಬಂಗಾಳ ಕ್ರಿಕೆಟ್ ಸಂಸ್ಥೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಮುನ್ನ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿನ್ ಹೀಗೆ ಹೇಳುವ ಮೂಲಕ `ವಯಸ್ಸು 40 ಆದರೂ ಆಟದ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ' ಎಂಬ ಸೂಚನೆ ನೀಡಿದರು.`40 ವರ್ಷ ವಯಸ್ಸಾಗಿದೆ ಎಂದು ನಾನು ಭಾವಿಸುವುದೇ ಇಲ್ಲ!' ಎಂದು ಸಚಿನ್ ಹಾಸ್ಯದ ಧಾಟಿಯಲ್ಲಿ ಹೇಳಿದರು. ಸಚಿನ್ 1989 ರಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ನಾಯಕತ್ವದಡಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಇದೀಗ ಶ್ರೀಕಾಂತ್   ಪುತ್ರ ಅನಿರುದ್ಧ್ ವಿರುದ್ಧವೂ ಆಡಿದ್ದಾರೆ.ಅನಿರುದ್ಧ್ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. `ಐಪಿಎಲ್‌ನಲ್ಲಿ ಶ್ರೀಕಾಂತ್ ಪುತ್ರ ನನ್ನ ವಿರುದ್ಧ ಆಡುತ್ತಿರುವುದು ವಿಶೇಷ ಅನುಭವ. ಇಂತಹ ಹಲವು ಅನುಭವಗಳು ನನಗೆ ಉಂಟಾಗಿದೆ. ಎಲ್ಲದಕ್ಕೂ ಕ್ರಿಕೆಟ್ ಕಾರಣ' ಎಂದು ಅವರು ತಿಳಿಸಿದರು.ನವದೆಹಲಿ (ಪಿಟಿಐ): ಬುಧವಾರ 40ನೇ ಹುಟ್ಟುಹಬ್ಬ ಆಚರಿಸಿದ ಸಚಿನ್ ತೆಂಡೂಲ್ಕರ್ ಅವರಿಗೆ ಎಲ್ಲಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಭಾರತ ತಂಡದ ಸಹ ಆಟಗಾರರು ಹಾಗೂ ಮಾಜಿ ಆಟಗಾರರು `ಟ್ವಿಟರ್'ನಲ್ಲಿ ಸಚಿನ್‌ಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ`ಟ್ವಿಟರ್'ನಲ್ಲಿ ಶುಭಾಶಯ

`ಮಾಸ್ಟರ್ ಬ್ಲಾಸ್ಟರ್'ಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಒಳ್ಳೆಯದು ಮಾಡಲಿ. ಸುದೀರ್ಘ ಆಯಸ್ಸು ಕರುಣಿಸಲಿ.

-ವಿನೋದ್ ಕಾಂಬ್ಳಿ

ದೇವರು ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ, ಯಶಸ್ಸು ನೀಡಲಿ

-ಯುವರಾಜ್ ಸಿಂಗ್

`ನೀನು ಈಗಲೂ ಆಡುತ್ತಿರುವುದನ್ನು ನೋಡಲು ಅದ್ಭುತ ಎನಿಸುತ್ತದೆ. ನೀನೇ ಕ್ರಿಕೆಟ್‌ನ ನಿಜವಾದ ದಂತಕತೆ'

-ಕರ್ಟ್ನಿ ವಾಲ್ಶ್, ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ

`ಅಂಗಣ ಮತ್ತು ಅಂಗಣದ ಹೊರಗೆ ನಾನು ಕಂಡಂತಹ ಶ್ರೇಷ್ಠ ಆಟಗಾರ ನೀವು'

-ರೋಹಿತ್ ಶರ್ಮ

ನಿಮ್ಮಂತೆಯೇ ಆಗಬೇಕೆಂಬ ಕನಸಿನೊಂದಿಗೆ ನಾನು ಕ್ರಿಕೆಟ್ ಆಡಲು ಶುರು ಮಾಡಿದೆ. ನಾನು ಕ್ರಿಕೆಟ್ ಆಟಗಾರನಾಗಲು ನೀವು ಕಾರಣ... ಥ್ಯಾಂಕ್ಸ್ ಸಚಿನ್... ಹುಟ್ಟುಹಬ್ಬದ ಶುಭಾಶಯಗಳು

- ಅಜಿಂಕ್ಯ ರಹಾನೆ

ಗೆಳೆಯ... 40ರ ಹರೆಯಕ್ಕೆ ಸ್ವಾಗತ! ಇನ್ನು ಮುಂದೆ ಸಿಂಗಲ್ಸ್ ಮಾತ್ರ ಗಳಿಸಿದರೆ ಸಾಕು. ವೇಗವಾಗಿ ರನ್ ಗಳಿಸಲು ಪ್ರಯತ್ನಿಸಬೇಡ..  ಶುಭಾಶಯಗಳು

-ಬ್ರಯಾನ್ ಲಾರಾ

ಪ್ರತಿಕ್ರಿಯಿಸಿ (+)