ಶನಿವಾರ, ಜೂನ್ 19, 2021
26 °C

ವಯೋಮಿತಿ ಮೀರುತ್ತಿರುವವರಿಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಲು ಸರ್ಕಾರ ಪ್ರವೇಶ ಪರೀಕ್ಷೆ ನಡೆಸಿ ಮೆರಿಟ್ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.ಈ ವ್ಯವಸ್ಥೆ ಶ್ಲಾಘನೀಯ. ಸರ್ವಶಿಕ್ಷಾ ಅಭಿಯಾನದಡಿಯಲ್ಲಿ ಪ್ರತಿ ಹಳ್ಳಿಗೊಂದು ಶಾಲೆ ತೆರೆದಂತೆ, ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆದರೆ ನೇಮಕಾತಿಯಲ್ಲಿ ವಯಸ್ಸು ಮೀರುತ್ತಿರುವ ಪದವೀಧರರಿಗೆ ಆದ್ಯತೆ ಸಿಗುತ್ತಿಲ್ಲ.ಈಗ ಡಿಇಡಿ, ಬಿಇಡಿ ಸಂಸ್ಥೆಗಳು  ಹೆಚ್ಚಾಗಿದ್ದು ಮೆರಿಟ್ ಇರುವ ಪದವೀಧರರ ಸಂಖ್ಯೆಯೂ ಹೆಚ್ಚಾಗಿದೆ.ಕೆಲ ವರ್ಷಗಳ ಹಿಂದೆ  ನೇಮಕಾತಿಯಲ್ಲಿ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಿತ್ತು. 1995 ರಿಂದೀಚೆಗೆ ಸರ್ಕಾರ ಈ ನಿಯಮ ಸಡಿಲಿಸಿದೆ.  ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ಕೆಲವು ಹುದ್ದೆಗಳನ್ನಾದರೂ ಸರ್ಕಾರ ಮೀಸಲಿಡಬೇಕು ಎಂದು ಒತ್ತಾಯಿಸುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.