ವರದಕ್ಷಿಣೆ ಕಿರುಕುಳ: ಗಂಟೆಗೊಬ್ಬ ಮಹಿಳೆ ಬಲಿ

7

ವರದಕ್ಷಿಣೆ ಕಿರುಕುಳ: ಗಂಟೆಗೊಬ್ಬ ಮಹಿಳೆ ಬಲಿ

Published:
Updated:

ನವದೆಹಲಿ (ಪಿಟಿಐ): ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ಮಹಿಳೆ ವರದಕ್ಷಿಣೆ ಸಂಬಂಧ ಕಾರಣಗಳಿಂದ ಸಾಯುತ್ತಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ 2007 ಹಾಗೂ 2011ರ ನಡುವೆ ಈ ಅಂಕಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ದೇಶದ ವಿವಿಧ ರಾಜ್ಯಗಳಲ್ಲಿ 2012 ರಲ್ಲಿ  8,233 ವರದಕ್ಷಿಣೆ ಸಾವುಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್‌ಸಿಆರ್‌ಬಿ) ತಿಳಿಸಿದೆ. ಇದು ಪ್ರತಿ ಗಂಟೆಗೆ ಮಹಿಳೆಯೊಬ್ಬರು ವರದಕ್ಷಿಣೆ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಸೂಚಿಸುತ್ತದೆ.2011 ರಲ್ಲಿ ವರದಕ್ಷಿಣೆ ಸಂಬಂಧಿ ಕಾರಣದಿಂದ 8,618 ಮಹಿಳೆಯರು ಮೃತಪಟ್ಟಿದ್ದಾರೆ. ಆದರೆ ಶಿಕ್ಷೆಗೆ ಗುರಿಯಾದವರು ಮಾತ್ರ ಶೇ 35.8 ಮಾತ್ರ. 2012ರಲ್ಲಿ ವರದಕ್ಷಿಣೆ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರ ಪ್ರಮಾಣ  ಶೇ 32.2007 ರಲ್ಲಿ  8,093 ವರದಕ್ಷಿಣೆ ಸಾವುಗಳು ವರದಿಯಾಗಿವೆ. 2008ರಲ್ಲಿ  8,172 ಹಾಗೂ 2009 ರಲ್ಲಿ  8,383 ಹಾಗೂ 2010 ರಲ್ಲಿ  8,391 ಮಹಿಳೆಯರು ಬಲಿಯಾಗಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry