ವರದಕ್ಷಿಣೆ: ನಾಲ್ವರು ಸಹೋದರಿಯರ ಆತ್ಮಹತ್ಯೆ

7

ವರದಕ್ಷಿಣೆ: ನಾಲ್ವರು ಸಹೋದರಿಯರ ಆತ್ಮಹತ್ಯೆ

Published:
Updated:

ಲಾಹೋರ್‌ (ಪಿಟಿಐ): ವರದಕ್ಷಿಣೆ  ಸಮಸ್ಯೆ  ಕೇವಲ ಭಾರತಕ್ಕೆ ಮಾತ್ರ ಸೀಮಿತ­ವಾಗಿಲ್ಲ. ಇದು ಪಾಕಿ­ಸ್ತಾನ­ದಲ್ಲೂ  ಇದೆ ಎಂಬುದಕ್ಕೆ ಸಾಕ್ಷಿ­ಯಾಗಿ ಶುಕ್ರವಾರ ಇಲ್ಲಿಯ ಪಂಜಾಬ್‌ ಪ್ರಾಂತ್ಯದ ನಾಲ್ವರು ಸಹೋ­ದರಿಯರು ವರದಕ್ಷಿಣೆ ಸಮಸ್ಯೆ ಎದುರಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತನ್ನ ಐದು ಹೆಣ್ಣುಮಕ್ಕಳಿಗೆ ವರ­ದಕ್ಷಿಣೆ ನೀಡಿ ಮದುವೆ ಮಾಡ­ಲಾಗದ ತಂದೆಯ ಅಸಹಾಯಕ ಸ್ಥಿತಿ­ಯನ್ನು  ನೋಡಿ ಬೇಸತ್ತ ನಾಲ್ವರು ಸಹೋದರಿಯರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ­ಯಲ್ಲಿ ಐದನೇ ಮಗಳು ಬದು­ಕುಳಿ­ದಿದ್ದಾಳೆ. ಈಕೆಯನ್ನು ಸ್ಥಳೀ­ಯರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry