ವರದರಾಜ ಆದ್ಯ ಸ್ಮಾರಕ ಪ್ರಶಸ್ತಿಗೆ ಅರ್ಜಿ ಆಹ್ವಾನ

7

ವರದರಾಜ ಆದ್ಯ ಸ್ಮಾರಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ಮುಂಬೈ:  ಇಲ್ಲಿನ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವರದರಾಜ ಆದ್ಯ ಅವರ ಸ್ಮರಣಾರ್ಥ ಪ್ರತಿ ವರ್ಷ ನೀಡುವ ಆದ್ಯ ಸ್ಮಾರಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕನ್ನಡ ಮರಾಠಿ ಭಾಷೆಗಳ ಸಾಹಿತ್ಯ, ಸಾಂಸ್ಕೃತಿಕ ಸೌಹಾರ್ದ ಮತ್ತು ಬಾಂಧವ್ಯವನ್ನು ಸಮೃದ್ಧಗೊಳಿಸುವಲ್ಲಿ ರಚನಾತ್ಮಕ ಸಾಧನೆ ಮಾಡಿದ ವ್ಯಕ್ತಿಗೆ ಅಥವಾ ಸಂಸ್ಥೆಗೆ ಇದನ್ನು ನೀಡಲಾಗುವುದು.11,000 ರೂ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡ ಇದನ್ನು ನೀಡುವಾಗ ವ್ಯಕ್ತಿಯ ಅಥವಾ ಸಂಸ್ಥೆಯ ಹಿಂದಿನ ಎರಡು ವರ್ಷಗಳ ಸಾಧನೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.2012ನೇ ಸಾಲಿನ ಪ್ರಶಸ್ತಿಗೆ 2010 ಮತ್ತು 2011 ಸಾಲಿನಲ್ಲಿ ಸಾಹಿತ್ಯ ಅಥವಾ ಕಲಾ ಕ್ಷೇತ್ರದಲ್ಲಿ  ವಿಶೇಷ ಸೇವೆ ಸಲ್ಲಿಸಿದವರನ್ನು ಪರಿಗಣಿಸಲಾಗುವುದು.ಆಸಕ್ತರು ಖಾಲಿ ಹಾಳೆಯಲ್ಲಿ ತಮ್ಮ ವಿವರಗಳನ್ನು ಮತ್ತು ಅದಕ್ಕೆ ಪೂರಕ ವಿವರ (ಪುರಾವೆ) ಗಳೊಂದಿಗೆ ಜನವರಿ 15ರ ಒಳಗೆ ಸಂಘದ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು ಎಂದು ಸಂಘ ಕೋರಿದೆ.ಕಾರ್ಯದರ್ಶಿ, ಕರ್ನಾಟಕ ಸಂಘ , ಡಾ. ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಛತ್ರಪತಿ ಶಿವಾಜಿ ಮಹಾರಾಜ್ ಮಾರ್ಗ, ಮೊಘಲ್‌ಲೇನ್, ಮಾಟುಂಗಾ (ಪಶ್ಚಿಮ),      ಮುಂಬೈ,- 400016

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry