ವರದಿಯಲ್ಲಿ ಅನಿಲ್‌ ಲಾಡ್‌ ಹೆಸರಿತ್ತು: ಜಿ. ಪರಮೇಶ್ವರ್‌

7

ವರದಿಯಲ್ಲಿ ಅನಿಲ್‌ ಲಾಡ್‌ ಹೆಸರಿತ್ತು: ಜಿ. ಪರಮೇಶ್ವರ್‌

Published:
Updated:

ಬೆಂಗಳೂರು: ವಾರ್ತಾ ಸಚಿವ ಸಂತೋಷ್‌ ಲಾಡ್‌ ಅವರ ಹೆಸರು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ನೇರವಾಗಿ ಪ್ರಸ್ತಾಪವಾಗಿಲ್ಲ. ಆದರೆ, ಅನಿಲ್‌ ಲಾಡ್‌ ಅವರ ಹೆಸರು ಇತ್ತು. ಈ ಕಾರಣಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಂಗಳವಾರ ಇಲ್ಲಿ ತಿಳಿಸಿದರು.ಸಂತೋಷ್‌ ಲಾಡ್‌ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದಕ್ಕೆ ಅವರ ಸಹೋದರ ಅನಿಲ್‌ ಲಾಡ್‌ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪರಮೇಶ್ವರ್‌ ಈ ಪ್ರತಿಕಿ್ರಯೆ ನೀಡಿದರು.ಪಕ್ಷದ ಹೈಕಮಾಂಡ್‌, ಸಚಿವರನ್ನು ನೇಮಕ ಮಾಡುವುದಕ್ಕೂ ಮುನ್ನ ಎಲ್ಲವನ್ನೂ ಕೂಲಕಂಷವಾಗಿ ಪರಿಶೀಲಿ­ಸಿದೆ. ಲೋಕಾಯುಕ್ತ ವರದಿಯಲ್ಲಿ ಸಂತೋಷ್‌ ಹೆಸರು ಎಲ್ಲೂ ನೇರವಾಗಿ ಪ್ರಸ್ತಾಪವಾಗಿಲ್ಲ. ಆದರೆ, ಅನಿಲ್‌ ಲಾಡ್‌ ಮತ್ತು ಅವರ ಕಂಪೆನಿಯ ಹೆಸರು ವರದಿಯಲ್ಲಿ ಇದೆ. ಈ ಕಾರಣಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ. ಅವರು ಆರೋಪ ಮುಕ್ತರಾದ ನಂತರ ಅವರಿಗೂ ಅವಕಾಶ ಸಿಗಬಹುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry