ಶುಕ್ರವಾರ, ನವೆಂಬರ್ 15, 2019
21 °C

ವರದಿ ಜಾರಿಗೆ ಆಗ್ರಹಿಸಿ ಬೈಕ್‌ರ‌್ಯಾಲಿ

Published:
Updated:

ಹರಿಹರ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ತಾಲ್ಲೂಕು ಮಾದಿಗ ಸಮಾಜ ಬಾಂಧವರು ಗುರುವಾರ ನಗರದ ಪ್ರಮುಖ ಬೀದಿಯಲ್ಲಿ ಬೈಕ್ ರ‌್ಯಾಲಿ ನಡೆಸಿದರು.ಹರಿಹರೇಶ್ವರ ದೇವಸ್ಥಾನದಿಂದ ಬೈಕ್ ರ‌್ಯಾಲಿ ಪ್ರಾರಂಭಗೊಂಡಿತು. ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆಯ ಮೂಲಕ ನಗರದಲ್ಲಿ ಸಂಚರಿಸಿತು.ರ‌್ಯಾಲಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಪಿ. ಗುಡದಯ್ಯ, ತಾಲ್ಲೂಕು ಎಪಿಎಂಸಿ ಸಮಿತಿ ಉಪಾಧ್ಯಕ್ಷ ಎ.ಕೆ. ಶಿವರಾಮ್, ಬೆಳ್ಳೂಡಿ ಹಾಲೇಶ್, ಕುಂಬಳೂರು ಹನುಮಂತಪ್ಪ, ಸುಭಾಷ್‌ಚಂದ್ರ ಬೋಸ್, ಮಲ್ಲೇಶ್, ಬನ್ನಿಕೋಡು ಹನುಮಂತಪ್ಪ, ನಾಗೇಂದ್ರಪ್ಪ, ಬಿ. ವಾಸುದೇವ, ಪೂಜಾರ್ ಹನುಮಂತಪ್ಪ, ಎಲ್.ಬಿ. ಹನುಮಂತಪ್ಪ, ಅಡಿಕಿ ಮಂಜುನಾಥ, ಎಚ್. ಸುಧಾಕರ, ಆರ್. ಮಂಜಪ್ಪ, ಮೈಲಪ್ಪ, ನೀಲಕಂಠಪ್ಪ, ಮಂಜಪ್ಪ, ಪ್ರಭು, ಚನ್ನಬಸಪ್ಪ, ಸುರೇಶ ತರದಳ್ಳಿ, ನಿಟ್ಟೂರು ಹನುಮಂತಪ್ಪ  ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)