ವರದಿ ನಿರಾಕರಿಸಿದ ಮಲ್ಯ
ನವದೆಹಲಿ (ಪಿಟಿಐ): ಫಾರ್ಮುಲಾ ಒನ್ ತಂಡ ಫೋರ್ಸ್ ಇಂಡಿಯಾದಲ್ಲಿ ಹೊಂದಿರುವ ಪಾಲು ಬಂಡವಾಳವನ್ನು ಸಹಾರಾ ಇಂಡಿಯಾಗೆ ಮಾರಾಟ ಮಾಡಲು ಮುಂದಾಗಿಲ್ಲ ಎಂದು ವಿಜಯ್ ಮಲ್ಯ ಸ್ಪಷ್ಟಪಡಿಸಿದ್ದಾರೆ.
ಮಲ್ಯ ಅವರು ಹಾಲೆಂಡ್ನ ಉದ್ಯಮಿ ಮಿಶೆಲ್ ಮೋಲ್ ಜೊತೆ ಫೋರ್ಸ್ ಇಂಡಿಯಾ ತಂಡದ ಒಡೆತನ ಹೊಂದಿದ್ದಾರೆ. ತಂಡದಲ್ಲಿ ಹೊಂದಿರುವ ಪಾಲನ್ನು ಸಹಾರಾ ಇಂಡಿಯಾಕ್ಕೆ ಮಾರಾಟ ಮಾಡಲು ಮಲ್ಯ ಯೋಜನೆ ಹಾಕಿಕೊಂಡಿದ್ದಾರೆ ಎಂದ ವರದಿಯಾಗಿತ್ತು. ಇಂತಹ ವರದಿಯನ್ನು ಅವರು ನಿರಾಕರಿಸಿದ್ದಾರೆ.
`ಫೋರ್ಸ್ ಇಂಡಿಯಾ ತಂಡದಿಂದ ಹೊರಬರುವ ಪ್ರಶ್ನೆಯೇ ಇಲ್ಲ. ಭಾರತದಲ್ಲಿ ಫಾರ್ಮುಲಾ ಒನ್ ರೇಸ್ ನಡೆಯಲಿರುವ ಕಾರಣ ತಂಡದ ಪ್ರದರ್ಶನವನ್ನು ಉತ್ತಮಪಡಿಸುವುದು ನನ್ನ ಗುರಿ~ ಎಂದಿದ್ದಾರೆ. ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ ಅ. 30 ರಂದು ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.