ವರಾಹವತಾರ: ವಿಶ್ವಕೋಶ ರಚನೆಗೆ ಎವಿಎನ್ ಸಲಹೆ

7

ವರಾಹವತಾರ: ವಿಶ್ವಕೋಶ ರಚನೆಗೆ ಎವಿಎನ್ ಸಲಹೆ

Published:
Updated:

ಮೈಸೂರು: ವರಾಹವತಾರದ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವಿಶ್ವಕೋಶ ತರಲು ವಿದ್ವಾಂಸರು ಹಾಗೂ ಸಂಶೋಧಕರು ಪ್ರಾಮಾಣಿಕ ವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ ಸಲಹೆ ನೀಡಿದರು.ಪ್ರಾಚ್ಯವಸ್ತು ಮತ್ತು ಸಂಗ್ರಹಾಲ ಯಗಳ ನಿರ್ದೇಶನಾಲಯ ಮತ್ತು ಮೇಲುಕೋಟೆಯ ಸಂಸ್ಕೃತ ಸಂಶೋಧನ ಸಂಸತ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆರಂಭವಾದ `ಧರ್ಮ, ಸಾಹಿತ್ಯ ಮತ್ತು ಕಲೆಯಲ್ಲಿ ವರಾಹಸ್ವಾಮಿ~ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ವರಾಹವತಾರದ ಬಗ್ಗೆ ಭಾರತದ ಎಲ್ಲಾ ಭಾಷೆಗಳಲ್ಲಿನ ಮಾಹಿತಿ ಸಂಗ್ರಹಿಸಿ ವಿಶ್ವಕೋಶ ತರಬೇಕು. ಶಾಸನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಸಂಪುಟಗಳ ರೂಪದಲ್ಲಿ ಹೊರತರ ಬೇಕು. ಅಲ್ಲದೇ ವರಾಹ ಚಿತ್ರವಿರುವ ಹಳೆಯ ನಾಣ್ಯಗಳನ್ನು ಸಂಗ್ರಹಿಸಬೇಕು ಎಂದು ಹೇಳಿದರು.ವರಾಹ ದೇವಾಲಯಗಳು ಇರುವ ಸ್ಥಳಗಳು ಹಾಗೂ ಅವುಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ವಿವಿಧ ದೇಶಗಳಲ್ಲಿ ಇರುವ ವರಾಹ ಶಿಲ್ಪಕಲೆಗಳು, ಆರಂಭವಾದಾಗಿನಿಂದ ಇಂದಿನವರೆಗೆ ಆಗಿರುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಅಲ್ಲದೇ ವರಾಹವತಾರದ ಬಗೆಗಿನ ಚಿತ್ರಕಲೆಗಳ ಮಾಹಿತಿಯನ್ನು ಸಂಪುಟ ರೂಪದಲ್ಲಿ ಹೊರತರಬೇಕು ಎಂದು ಸಲಹೆ ನೀಡಿದರು.ಅಂದು ವಿಷ್ಣು ವರಾಹವತಾರ ತಾಳಿ ಭೂದೇವಿಯನ್ನು ರಕ್ಷಿಸಿದ. ಭೂಮಿ ಇಲ್ಲದೇ ಇಂದು ನಾವು ಬದುಕಿರಲು ಸಾಧ್ಯವಿಲ್ಲ. ಆದರೆ ಇಂದು ಮಾನವರು ತಮ್ಮ ಉಪಯೋಗಕ್ಕೋಸ್ಕರ ಭೂಮಿಯನ್ನು ನೂರಾರು ರೀತಿಯಲ್ಲಿ ಜನರು ಹಾಳು ಮಾಡುತ್ತಿದ್ದು, ಅವರಿಗೆ ಭೂಮಿಯನ್ನು ರಕ್ಷಿಸುವ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು. ಅಲ್ಲದೇ ಭೂಮಿ ದಿನವನ್ನು `ವರಾಹ ಜಯಂತಿ~ಯಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.ಸಂಸ್ಕೃತ ಸಂಶೋಧನ ಸಂಸತ್ ನಿರ್ದೇಶಕ ಭಾಷ್ಯಂ ಸ್ವಾಮೀಜಿ ಮಾತನಾಡಿದರು.

ಪ್ರಾಚ್ಯವಸ್ತು ಸಂಗ್ರಹಾಲಯದ ಪ್ರಕಟಣೆಗಳಾದ ಬಾಗಲಕೋಟೆಯ ಇತಿಹಾಸ ಮತ್ತು ಪುರಾತತ್ವ, ಕೊಪ್ಪಳ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ವಿಜಯನಗರ ಅಧ್ಯಯನ-16ನೇ ಸಂಪುಟ, ಜೈನಿಸಂ ತ್ರೂ ದಿ ಏಜಸ್, ಕೆಂಪೇಗೌಡರ ಜೀವನ ಮತ್ತು ಸಾಧನೆ, ಅಲೆಗ್ಸಾಂಡರ್ ಜೆ.ಗ್ರೀನ್ ಲಾ, ಜಾನ್ ಗಾಲಿಂಗ್ಸ್, ಡಾ. ಆರ್.ಗೋಪಲ್ ಕಂಡಂತೆ (ಪರಿಷ್ಕೃತ ಮುದ್ರಣ) ಕರ್ನಾಟಕ ವಾಸ್ತುಶಿಲ್ಪ ಉದ್ಯಾನ (ಪುನರ್‌ಮುದ್ರಣ) ಕರ್ನಾಟಕ ಎ ಗಾರ್ಡನ್ ಆಫ್ ಆರ್ಕಿಟೆಕ್ಚರ್ (ಪುನರ್‌ಮುದ್ರಣ) ದಿ ಗ್ಲೋರಿಯಸ್ ಕೆಳದಿ ಹಾಗೂ ಸಂಸ್ಕೃತ ಸಂಶೋಧನ ಸಂಸತ್‌ನ ಪ್ರಕಟಣೆಗಳಾದ ಕಠೋಪನಿಷತ್ (ಕನ್ನಡ), ಕೌಷತಕೀ ಬ್ರಾಹ್ಮಣೋಪ ನಿಷತ್ (ಸಂಸ್ಕೃತ) , ಗೀತಾಶ್ಲೋಕಾರ್ಥ ವಿವೃತ್ತಿಃ (ಸಂಸ್ಕೃತ), ವಾರ್ತಾಪತ್ರ- 2011 ಲೋಕಾರ್ಪಣೆಗೊಳಿಸ ಲಾಯಿತು.ಇದೇ ಸಂದರ್ಭದಲ್ಲಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶ ನಾಲ ಯದ ವೆಬ್‌ಸೈಟ್ ಅನ್ನು ಶಾಸಕ ಸಾ.ರಾ.ಮಹೇಶ್ ಅನಾವರಣ ಗೊಳಿಸಿದರು.ಶಾಸಕ ಎಂ.ಸತ್ಯನಾರಾಯಣ ಮಾತನಾಡಿದರು. ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ನಿರ್ದೇಶಕ ಆರ್.ಗೋಪಾಲ್ ಸ್ವಾಗತಿಸಿದರು. ನಿವೃತ್ತ ನಿರ್ದೇಶಕರಾದ ಅ.ಸುಂದರ, ಸತ್ಯಮೂರ್ತಿ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಸ್.ಕೃಷ್ಣಮೂರ್ತಿ, ಸಂಸ್ಕೃತ ಸಂಶೋಧನ ಪರಿಷತ್‌ನ ರಿಜಿಸ್ಟ್ರಾರ್ ಕುಮಾರ್ ಇತರರು ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry