ಗುರುವಾರ , ಮೇ 13, 2021
22 °C

ವರುಣನ ಕೃಪೆಗಾಗಿ 101 ತೆಂಗಿನಕಾಯಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನಲ್ಲಿ ಸತತ ಎರಡನೇ ವರ್ಷ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ವರುಣನ ಕೃಪೆಗೆ ನಗರದ ತೆರುಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶುಕ್ರವಾರ ವಂದೇ ಮಾತರಂ ಜಾಗೃತಿ ವೇದಿಕೆ ವತಿಯಿಂದ 101 ತೆಂಗಿನಕಾಯಿಗಳ ಪೂಜೆ ಸಲ್ಲಿಸಲಾಯಿತು.ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ. ಕೂಲಿಯನ್ನೇ ನಂಬಿರುವ ಜನ ಕೂಲಿ ಸಿಗದೆ ದಿಕ್ಕು ತೋಚದಂತೆ ಆಗಿದ್ದಾರೆ. ಸರ್ಕಾರ ಬರಪೀಡಿತ ಜನರ ಸಹಾಯಕ್ಕೆ ಬಾರದ ಕಾರಣ ದೈವದ ಮೊರೆ ಹೋಗಲಾಗಿದೆ ಎಂದರು.ವಂದೇಮಾತರಂ ಜಾಗೃತಿ ವೇದಿಕೆ ಖಜಾಂಚಿ ಹಿತೇಶ್ ವಡೇರ್ ಮಾತನಾಡಿ, ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ತೇರುಮಲ್ಲೇಶ್ವರಸ್ವಾಮಿ ನಂಬಿದ ಭಕ್ತರ ಕೈಬಿಡುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ, ವೇದಿಕೆ ವತಿಯಿಂದ ತೆಂಗಿನಕಾಯಿ ಹರಕೆ ಸಲ್ಲಿಸುತ್ತಿದ್ದೇವೆ. ಈ ಬಾರಿ ಉತ್ತಮ ಮಳೆ-ಬೆಳೆಯಾದರೆ ಮತ್ತೊಮ್ಮೆ ಹರಕೆ ಸಲ್ಲಿಸುತ್ತೇವೆ ಎಂದರು.ಪ್ರಸ್ತುತ ಮುಂಗಾರು ಮಳೆ ವಿವಿಧ ಜಿಲ್ಲೆಗಳಲ್ಲಿ ಉತ್ತಮವಾಗಿ ಬೀಳುತ್ತಿದೆ. ನಮ್ಮ ಭಾಗದಲ್ಲೂ ಉತ್ತಮ ಮಳೆ ಬೀಳುವಂತಾಗಲು ದೇವರ ಮೊರಹೋಗಿದ್ದೇವೆ. ಮಳೆಯಾದಲ್ಲಿ ಜಾನುವಾರುಗಳು ಎದುರಿಸುತ್ತಿರುವ ಮೇವಿನ ಕೊರತೆಯೂ ನೀಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.ಸದಾನಂದ್, ವಿಶ್ವನಾಥ್, ಪಂಚಾಕ್ಷರಿ, ನಾಗರಾಜ್, ಹೇಮಂತ ಕುಮಾರ್, ಸುಮಂತಕುಮಾರ್, ಅರುಣ್, ಪ್ರಸನ್ನ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.