ವರುಣ್ ಆ್ಯರನ್ ಬದಲಿಗೆ ಬೆನ್ ರೊಹ್ರರ್

7

ವರುಣ್ ಆ್ಯರನ್ ಬದಲಿಗೆ ಬೆನ್ ರೊಹ್ರರ್

Published:
Updated:

ನವದೆಹಲಿ: ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ವರುಣ್ ಆ್ಯರನ್ ಬದಲಿಗೆ ಆಸ್ಟ್ರೇಲಿಯಾದ ಬೆನ್ ರೊಹ್ರರ್ ಅವರೊಂದಿಗೆ ಡೆಲ್ಲಿ ಡೇರ್‌ಡೆವಿಲ್ಸ್ ಒಪ್ಪಂದ ಮಾಡಿಕೊಂಡಿದೆ.ರೊಹ್ರರ್ ನ್ಯೂ ಸೌತ್ ವೇಲ್ಸ್ ತಂಡದ ನಾಯಕ ಹಾಗೂ ಎಡಗೈ ಬ್ಯಾಟ್ಸ್‌ಮನ್. ಆಸ್ಟ್ರೇಲಿಯಾದ ದೇಶಿ ಟೂರ್ನಿ ಬಿಗ್ ಬಾಷ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 32 ವರ್ಷ ವಯಸ್ಸಿನ ಈ ಆಟಗಾರ 49.16 ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ.`ಡೇರ್‌ಡೆವಿಲ್ಸ್ ತಂಡದಲ್ಲಿ ಆಡಲು ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದು ರೊಹ್ರರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry